ರುದ್ರಪ್ರಯಾಗ: ಆರೋಗ್ಯ ಸಮಸ್ಯೆಯಿಂದಾಗಿ ಕೇದಾರನಾಥ ದೇಗುಲಕ್ಕೆ ತೆರಳುತ್ತಿದ್ದ ಇನ್ನೂ ನಾಲ್ವರು ಯಾತ್ರಾರ್ಥಿಗಳು ಬುಧವಾರ (ಮೇ 25) ಸಾವನ್ನಪ್ಪಿದ್ದು, ಅಸ್ವಸ್ಥಗೊಂಡ ಇತರ ಮೂವರನ್ನು ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಋಷಿಕೇಶದ ಏಮ್ಸ್ ಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಳಲಿ ಮಸೀದಿಯ ಸರ್ವೇ ನಡೆಯಬೇಕು, ಜನರು ಸತ್ಯ ತಿಳಿಯಲಿ: ಡಾ ಸುರೇಂದ್ರ ಕುಮಾರ್ ಜೈನ್
ಮೇ 6ರಿಂದ ಕೇದಾರನಾಥ ದೇಗುಲವನ್ನು ಯಾತ್ರಾರ್ಥಿಗಳಿಗೆ ತೆರೆಯಲಾಗಿತ್ತು. ಈವರೆಗೆ ಹೃದಯ ಮತ್ತು ಇತರ ಆರೋಗ್ಯ ಸಂಬಂಧ ಸಮಸ್ಯೆಯಿಂದಾಗಿ ಒಟ್ಟು 38 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿರುವುದಾಗಿ ರುದ್ರಪ್ರಯಾಗದ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ.ಶುಕ್ಲಾ ಮಾಹಿತಿ ನೀಡಿದ್ದಾರೆ.
ಮೃತ ಯಾತ್ರಾರ್ಥಿಗಳನ್ನು ಗ್ವಾಲಿಯರ್ ನ ರಿಷಿ ಭಾದುರಿಯಾ (65ವರ್ಷ), ಮಧ್ಯಪ್ರದೇಶ ಗುನಾ ನಿವಾಸಿ ಶಂಭು ದಯಾಳ್ ಯಾದವ್(66ವರ್ಷ), ಉತ್ತರಪ್ರದೇಶದ ಕಮಲನಾಥ ಭಟ್ (60ವರ್ಷ) ಮತ್ತು ಮಹಾರಾಷ್ಟ್ರ ಕೊಲ್ಹಾಪುರ್ ನಿವಾಸಿ ಚೆಂಗ್ ದೇವ್ ಜನಾರ್ಧನ್ ಶಿಂಧೆ ಎಂದು ಗುರುತಿಸಲಾಗಿದೆ.
ಉಸಿರಾಟ ಸಮಸ್ಯೆಯಿಂದ ಅಸ್ವಸ್ಥಗೊಂಡ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಋಷಿಕೇಶದ ಏಮ್ಸ್ ಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.