ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಾಮಿನ ಸಂಖ್ಯೆ ಭಾನುವಾರ ಶತಕದ ಗಡಿ ದಾಟಿದೆ.
ಭಾನುವಾರ ಜಿಲ್ಲಾಡಳಿತ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಕೋವಿಡ್-19 ಆರೋಗ್ಯ ವರದಿಯಲ್ಲಿ ಸೋಂಕಿತರಲ್ಲಿ ಮತ್ತೆ 4 ಮೃತಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಾವಿನ ಸಂಖ್ಯೆ ಶತಕ ದಾಟಿದೆ. ಜಿಲ್ಲೆಯ ಒಟ್ಟು ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.
ಭಾನುವಾರ ಮತ್ತೆ 127 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 6589 ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕು ರೋಗದಿಂದ ಗುಣಮುಖರಾಗಿ ಮತ್ತೆ 196 ಜನರು ಮನೆಗೆ ಮರಳಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 5731ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ತಾಂಜೇನಿಯಾ- ಗೋವಾ- ಶಿವಮೊಗ್ಗ .. ಅಪರೂಪದ ನೀರಾನೆ ದಂತ ಕಳ್ಳಸಾಗಾಣಿಕೆ ಹಿಂದಿದೆ ರೋಚಕ ಕಹಾನಿ
ಜಿಲ್ಲೆಯ ಕೋವಿಡ್ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಶನ್ ಸೇರಿ 773 ಜನರು ಮಾತ್ರ ಆರೋಗ್ಯ ನಿಗಾದಲ್ಲಿದ್ದಾರೆ.