Advertisement
ಡೇರಾ ಮುಖ್ಯಸ್ಥನ ಪಲಾಯನಕ್ಕೆ ಸಹಕರಿಸಿದ ಸಂಚಿನಲ್ಲಿ ಭಾಗಿಯಾಗಿದ್ದ ಮೂವರು ಹರಿಯಾಣ ಪೊಲೀಸ್ ಕಮಾಂಡೋಗಳನ್ನು ಪಂಚಕುಲದಲ್ಲಿ ನಿನ್ನೆ ಗುರುವಾರ ಬಂಧಿಸಲಾಗಿದೆಯಾದರೆ ರಾಜಸ್ಥಾನ ಪೊಲೀಸ್ ಸಿಬಂದಿ ಓಂ ಪ್ರಕಾಶ್ ಎಂಬಾತನನ್ನು ಹನುಮಾನ್‌ಗಢದಲ್ಲಿ ಸೆರೆ ಹಿಡಿಯಲಾಯಿತು.
Related Articles
Advertisement
ಪಂಚಕುಲ ಪೊಲೀಸ್ ಕಮಿಶನರ್ ಎ ಎಸ್ ಚಾವ್ಲಾ ಅವರು, “ಪಂಜಾಬ್, ಚಂಡೀಗಢ ಮತುತ ರಾಜಸ್ಥಾನದ ಪೊಲೀಸ್ ಸಿಬಂಧಿಗಳು ಮಾತ್ರವಲ್ಲದೆ ಹರಿಯಾಣ ಪೊಲೀಸ್‌ನ ಮೂವರು ಕಮಾಂಡೋಗಳು ಆಗಸ್ಟ್ 25ರಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು’ ಎಂದು ತಿಳಿಸಿದ್ದಾರೆ.
ಮೂವರು ಹರಿಯಾಣ ಪೊಲೀಸ್ ಕಮಾಂಡೋಗಳಿಗೆ ಡೇರಾ ಮುಖ್ಯಸ್ಥನ ಕೋರ್ಟ್ ರೂಮ್ ಪಲಾಯನ ಸಂಚಿಗೆ ಸಂಬಂಧಿಸಿದ ತನಿಖೆಗೆ ಸಮನ್ಸ್ ನೀಡಿ ಕರೆಸಿಕೊಂಡ ಸಂದರ್ಭದಲ್ಲಿ “ತಾವು ತೀರ್ಪು ಪ್ರಕಟನೆಯ ದಿನದಂದು ಪಂಚಕುಲಕ್ಕೆ ಯಾಕೆ ಬಂದಿದ್ದರು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟಿಲ್ಲ’ ಎಂದು ಚಾವ್ಲಾ ಹೇಳಿದರು.
ಈ ಬಂಧನಗಳಿಗೆ ಹೊರತಾಗಿ ಮತ್ತು ಪ್ರತ್ಯೇಕವಾಗಿ ಡೇರಾ ಮುಖ್ಯಸ್ಥನ ನಿಕಟವರ್ತಿ, ವಕ್ತಾರ, ಹಿಂಸೆಗೆ ಪ್ರಚೋದನೆ ನೀಡಿದಾತ, ದಿಲಾವರ್ ಸಿಂಗ್ ಇನ್ಸಾನ್‌ನನ್ನು ಹರಿಯಾಣ ಪೊಲೀಸರು ನಿನ್ನೆ ಗುರುವಾರ ಸೋನೇಪತ್‌ನಲ್ಲಿ ಸೆರೆ ಹಿಡಿದಿದ್ದಾರೆ.