Advertisement

ಪೌರತ್ವ ವಿಧೇಯಕದ ವಿರುದ್ಧ ಇರುವ ನಾಲ್ಕು ತಪ್ಪು ಕಲ್ಪನೆಗಳು

10:08 AM Dec 12, 2019 | mahesh |

ಕಲ್ಪನೆ 1. ಮುಸ್ಲಿಂ ಸಮುದಾಯದವರನ್ನು ಮಾತ್ರ ದೇಶದ ಒಳಕ್ಕೆ ಬಿಟ್ಟು ಕೊಡುತ್ತಿಲ್ಲ. ಇತರ ಸಮುದಾಯದವರಿಗೆ ಆದ್ಯತೆ
ಸತ್ಯಾಂಶ: ಇದು ಸತ್ಯಾಂಶದಿಂದ ಕೂಡಿದ ಅಂಶವಲ್ಲ. ಸಿಎಬಿಯಲ್ಲಿ ಆ ಅಂಶವನ್ನೇ ಉಲ್ಲೇಖೀಸಲಾಗಿಲ್ಲ. 2015ರ ಸೆಪ್ಟೆಂಬರ್‌ನಲ್ಲಿ ಜಾರಿಗೊಂಡ ಪಾಸ್‌ಪೋರ್ಟ್‌ (ಭಾರತಕ್ಕೆ ಪ್ರವೇಶ) ಕಾಯ್ದೆ 1920 ಮತ್ತು ವಿದೇಶಿಯರ ಕಾಯ್ದೆ 1946 (ಫಾರಿನರ್ಸ್‌ ಆ್ಯಕ್ಟ್)ರ ಅಂಶವೇ ತಿದ್ದುಪಡಿ ವಿಧೇಯಕಕ್ಕೆ ಪ್ರಧಾನ ಅಂಶ. ಯಾರಿಗೆ ಪೌರತ್ವ ನೀಡಬೇಕು ಎಂಬುದರ ಬಗ್ಗೆ ವಿಧಿಸಲಾಗಿರುವ ಕಾಲಮಿತಿಯೇ ಇವೆರಡು ಅಂಶಗಳಿಂದ ಪ್ರೇರಿತಗೊಂಡವು.

Advertisement

ಲೋಕಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕದ ಪ್ರತಿಯಂತೆ ಆರು ಸಮುದಾಯದವರಿಗೆ ಸ್ವಯಂ ಪ್ರೇರಿತವಾಗಿ ಪೌರತ್ವ ನೀಡಲಾಗು ವುದಿಲ್ಲ. ಅವರು 1955ರ ಪೌರತ್ವ ಕಾಯ್ದೆಯ ಮೂರನೇ ಷೆಡ್ನೂಲ್‌ನಲ್ಲಿ ಉಲ್ಲೇಖಗೊಂಡ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ.
ಆರು ವರ್ಷಗಳ ಕಾಲ ದೇಶದಲ್ಲಿ ವಾಸ ಮಾಡಿದವರಿಗೆ ಪೌರತ್ವ ನೀಡಲಾಗುತ್ತದೆ. ಹೀಗಾಗಿ ಕೇವಲ ಆರು ಸಮುದಾಯಗಳಿಗೆ ಮಾತ್ರ ಮತ್ತು ಇತರರಿಗೆ ಅವಕಾಶ ಇಲ್ಲ ಎಂಬ ವಾದ ಸರಿಯಲ್ಲ.
2015ರ ಬಳಿಕ ಆರು ಸಮುದಾಯಗಳಿಗೆ ಸೇರಿದ ಯಾವುದೇ ವ್ಯಕ್ತಿ ನಿರಾಶ್ರಿತನೆಂದು ಭಾರತ ಪ್ರವೇಶ ಮಾಡಿದ್ದರೆ ಆತ ಹೇಳಿಕೊಂಡಿರುವುದು ಮುಂದುವರಿಯುತ್ತದೆ.

ಕಲ್ಪನೆ 2.ಈ ವಿಧೇಯಕ ಅಂಗೀಕಾರಗೊಂಡರೆ ಮುಸ್ಲಿಂ ನಿರಾಶ್ರಿತರು ಮತ್ತು ಇತರ ದೇಶಗಳ ನಿರಾಶ್ರಿತರನ್ನು ಹೊರಹಾಕಲಾಗುತ್ತದೆ.
ಸತ್ಯಾಂಶ: ಮ್ಯಾನ್ಮಾರ್‌ನಿಂದ ಭಾರತಕ್ಕೆ ಬಂದ ಕೆಲವು ರೊಹಿಂಗ್ಯಾ ಸಮುದಾಯದವರನ್ನು ವಾಪಸ್‌ ಕಳುಹಿಸಿದ್ದ ಕಾರಣ ಈ ಸುಳ್ಳು ಸೃಷ್ಟಿಗೊಂಡಿರಬಹುದು. ಈ ಅಂಶವನ್ನು ಕಲ್ಪನೆ 3ರಲ್ಲಿ ವಿಶ್ಲೇಷಿಸಲಾಗಿದೆ.
ಸಿಎಬಿಯಲ್ಲಿ ಸೇರ್ಪಡೆಗೊಳ್ಳದೆ ಇರುವ ನಿರಾಶ್ರಿತರು ಹಾಲಿ ಇರುವ ಎಲ್ಲಾ ಅಧಿಕಾರ ಸ್ವಾತಂತ್ರ್ಯಗಳನ್ನು ಅರ್ಹವಾಗಿಯೇ ಪಡೆದುಕೊಳ್ಳುತ್ತಾರೆ. ವಿಧೇಯಕದಲ್ಲಿ ಉಲ್ಲೇಖಗೊಂಡಿರುವ ಸಮುದಾಯದ ಹೊರತಾಗಿರುವವರು ಮಾತ್ರ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. ಹಾಗೆ ಇಲ್ಲದವರನ್ನು ಗಡಿಪಾರು ಮಾಡಲಾಗುತ್ತದೆ ಎಂಬ ಪ್ರಸ್ತಾಪವಿಲ್ಲ.

ಶಿಯಾ ಮುಸ್ಲಿಂ ಸಮುದಾಯದ ವ್ಯಕ್ತಿ ಭಾರತದಲ್ಲಿ ಆಶ್ರಯ ಪಡೆದಿದ್ದರೆ ಅವರ ಮನವಿಯ ಅರ್ಹತೆ ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿ ಅವರಿಗೆ ನೀಡಲಾಗಿರುವ ವ್ಯವಸ್ಥೆ ಮುಂದುವರಿಯುತ್ತದೆ. ಶ್ರೀಲಂಕಾದ ತಮಿಳರು ಮತ್ತು ಟಿಬೆಟಿಯನ್‌ ಸಮದಾಯದ ಕೆಲವರು ಈಗಾಗಲೇ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಂದ ಬಂದ ಮುಸ್ಲಿಮರನ್ನು ಸಿಎಬಿ ಕಡೆಗಣಿಸುತ್ತಿಲ್ಲ. ಗಾಯಕ ಅದ್ನಾನ್‌ ಸಾಮಿ ಅವರಿಗೆ ಯಾವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯೋ ಅದು ಅವರಿಗೆ ಮುಂದುವರಿಯುತ್ತದೆ.

ಕಲ್ಪನೆ 3. ರೊಹಿಂಗ್ಯಾಗಳು ಮತ್ತು ಬಲೂಚಿಗಳನ್ನು ಸಿಎಬಿಯಿಂದ ಹೊರಗೆ ಇರಿಸಿರುವುದು ಸಮಾನತೆಯನ್ನು ಉಲ್ಲಂ ಸಿದಂತಾಗುತ್ತದೆ.
ಸತ್ಯಾಂಶ: ನಿರಾಶ್ರಿತರ ನೀತಿಯ ಮೊದಲ ಅಂಶವೇ ನಿರಾಶ್ರಿತರಿಗೆ ಆಶ್ರಯ ನೀಡುವುದು. ನಿಗದಿತ ದೇಶದಲ್ಲಿ ಪರಿಸ್ಥಿತಿ ಸುಧಾರಿಸುವ ವರೆಗೆ ಈ ವ್ಯವಸ್ಥೆ ಮುಂದುವರಿಯುತ್ತದೆ. ಮೂರು ರಾಷ್ಟ್ರಗಳಲ್ಲಿರುವ ಆರು ಸಮುದಾಯಗಳ ಸದಸ್ಯರಿಗೆ ಸದ್ಯೋಭವಿಷ್ಯದಲ್ಲಿ ಅಲ್ಲಿನ ಸ್ಥಿತಿ ಸುಧಾರಿಸುವ ಸಾಧ್ಯತೆಗಳು ಕಾಣುತ್ತಿಲ್ಲ. ಹಲವು ದಶಕಗಳಿಂದ ಕಂಡು ಬಂದ ಪರಿಸ್ಥಿತಿ ಈ ಅಂಶವನ್ನು ಪುಷ್ಟೀಕರಿಸುತ್ತದೆ.
ಬಲೂಚಿ ನಿರಾಶ್ರಿತರಿಗೆ ಸಂಬಂಧಿಸಿದಂತೆ ಸಿಎಬಿಯಲ್ಲಿ ಉಲ್ಲೇಖ ಮಾಡಲಾಗಿಲ್ಲ. ಬಲೂಚಿಗಳು ಭಾರತ ಪ್ರವೇಶ ಮಾಡಿದ್ದರೆ ಅವರನ್ನು ಗಡಿಪಾರು ಮಾಡಲಾಗುತ್ತದೆ ಎಂಬ ಅಂಶವೂ ಸರಿಯಲ್ಲ. ರಾಷ್ಟ್ರೀಯ ಭದ್ರತೆ ಮತ್ತು ಇತರ ಪೂರಕ ಅಂಶಗಳನ್ನು ಪರಿಗಣಿಸಿ ಅವರಿಂದ ತೊಂದರೆ ಉಂಟಾಗುತ್ತದೆಯೇ ಎಂದು ನಿರ್ಧರಿಸಲಾಗುತ್ತದೆ.

Advertisement

ರೊಹಿಂಗ್ಯಾ ವಿಚಾರ ಪರಿಶೀಲಿಸುವುದಿದ್ದರೆ ಅವರಿಂದಾಗಿ ರಾಷ್ಟ್ರೀಯ ಭದ್ರತೆಗೆ ಗಂಭೀರವಾಗಿ ಅಪಾಯ ಇದೆ. ಬಾಂಗ್ಲಾದೇಶದ ಪ್ರಧಾನಮಂತ್ರಿಗಳೂ ಕೂಡ ಅವರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು ಹೇಳಿದ್ದಾರೆ. ರೊಹಿಂಗ್ಯಾಗಳು ಸಿಎಬಿಯಲ್ಲಿ ಉಲ್ಲೇಖಗೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಇಲ್ಲ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಾಕಿ ಇದೆ.

ಕಲ್ಪನೆ4. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ಭಾರತದ ಸಂವಿಧಾನ ನಿಷೇಧಿಸುತ್ತದೆ.
ಸತ್ಯಾಂಶ: ನಿಗದಿತ ಸಮುದಾಯಗಳನ್ನು ಉದ್ದೇಶಿಸಿ ಜಾರಿ ಮಾಡಲಾಗಿರುವ ಸರ್ಕಾರಿ ಸೌಲಭ್ಯಗಳು ಸಾಂವಿಧಾನಿಕ ಪರೀಕ್ಷೆಯನ್ನು ಗೆದ್ದಿವೆ. ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದನ್ನು ಈ ನಿಟ್ಟಿನಲ್ಲಿ ಉತ್ತಮ ಉದಾಹರಣೆಯನ್ನಾಗಿ ಪರಿಗಣಿಸಬಹುದು ಸುಪ್ರೀಂಕೋರ್ಟ್‌ ನೀಡಿದ ಹಲವು ತೀರ್ಪುಗಳ ಅನ್ವಯ ಸಂವಿಧಾನದ 14ನೇ ವಿಧಿ ವಿದೇಶಿಯರಿಗೆ ಅನ್ವಯವಾಗುವುದಿಲ್ಲ. ಸಿಎಬಿಯಲ್ಲಿ ಉಲ್ಲೇಖ ಮಾಡಿರುವಂತೆ ಭಾರತದಲ್ಲಿ ನೆಲೆಸಿರುವರಿಗೆ ಕಾನೂನಿನ ಅನ್ವಯ ಸಮಾನ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಹೊರತಾಗಿಯೂ ಕೆಲ ವೊಂದು ಅಂಶಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಿಎಬಿ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿರುವ ಅಂಶಗಳು ಸರಿಯೋ ತಪ್ಪೋ ಎಂದು ಹೇಳಲು ಕೋರ್ಟ್‌ಗಳೇ ಶಕ್ತವಾದವು. ವಿಧೇಯಕದಲ್ಲಿ ಭಾರತದಲ್ಲಿ ಆವಿರ್ಭವಿಸಿದ ಹಿಂದೂ, ಬೌದ್ಧ, ಸಿಖ್‌ ಮತ್ತು ಜೈನ ಸಮುದಾಯಕ್ಕೆ ಹೊರತಾಗಿರುವ ಬೇರೆ ದೇಶದಿಂದ ಬಂದ ಕ್ರಿಶ್ಚಿಯನ್‌ ಸಮುದಾಯದ ನಿರಾಶ್ರಿತರಿಗೂ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next