Advertisement

ನಾಲ್ಕೇ ಅಡಿಗೆ ಚಿಮ್ಮಿತು ಬೋರ್‌ವೆಲ್‌!

01:00 AM Feb 06, 2019 | Harsha Rao |

ಬಂಟ್ವಾಳ: ಬರಡು ಭೂಮಿಯಲ್ಲಿ ಕೊಳವೆಬಾವಿ ಕೊರೆಯಲು ಆರಂಭಿಸಿದ್ದಷ್ಟೆ… ಕೆಲವೇ ನಿಮಿಷಗಳಲ್ಲಿ ನೀರು ಚಿಮ್ಮಲಾರಂಭಿಸಿತು. ಅದನ್ನು ಕಂಡ ಸ್ಥಳೀಯರು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಆದರೆ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ನಿಜ ತಿಳಿದಾಗ ನಿರಾಸೆ ಮೂಡಿತು.

Advertisement

ಸಜೀಪಮೂಡದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂದೇಶಗಳು ಹರಿದಾಡುತ್ತಿವೆ.

ನಡೆದದ್ದೇನು?
ಸಜೀಪಮೂಡ ಗ್ರಾ.ಪಂ. ಅನುದಾನದಲ್ಲಿ ಕಂದೂರಿನಲ್ಲಿ ಕೊಳವೆಬಾವಿ ತೋಡಲು ನಿರ್ಣಯಿಸಲಾಗಿತ್ತು. ನೀರು ಪರಿಶೋಧಕರು ಮೇಲ್ಭಾಗದಲ್ಲೇ ನೀರು ಸಿಗುವ ಖಾತರಿಯನ್ನೂ ನೀಡಿದ್ದರು. ನೇತ್ರಾವತಿ ನದಿಯಿಂದ ಮಂಗಳೂರಿನ ಕೊಣಾಜೆಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಅದೇ ಜಾಗದಲ್ಲಿದ್ದು, ಅದನ್ನರಿಯದೆ ಶನಿವಾರ ಸಂಜೆ ಬಾವಿ ಕೊರೆಯಲಾರಂಭಿಸಲಾಯಿತು. ನಾಲ್ಕೈದು ಅಡಿ ಆಳದಲ್ಲಿರುವ ಕಬ್ಬಿಣದ ಪೈಪ್‌
ಲೈನ್‌ ತೂತಾಗಿ ನೀರು ಹರಿಯಲಾರಂಭಿಸಿತು. ಕೆಲಸಗಾರರು ಮತ್ತು ಸ್ಥಳದಲ್ಲಿದ್ದವರ ಸಂಭ್ರಮ ಮುಗಿಲು ಮುಟ್ಟಿತು. ವಿಷಯ ತಿಳಿದ ನೂರಾರು ಮಂದಿ ಜಮಾಯಿಸಿದರು. ಇಷ್ಟೆಲ್ಲ ಆಗುವಾಗ ನಿಜ ವಿಚಾರ ಗೊತ್ತಾಯಿತು.

ನಿರಾಸೆಯ ನಡುವೆ ತಮಾಷೆ ವಸ್ತುವಾಗಿ ನಗುವಿಗೂ ಕಾರಣವಾಯಿತು. ಬಳಿಕ ಪೈಪ್‌ಲೈನ್‌ ಸರಿಪಡಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಯಿತು.

ಆ ಸ್ಥಳದಲ್ಲಿ 400 ಅಡಿ ಆಳದಲ್ಲಿ ನೀರು ಸಿಗಬಹುದೆಂದು ತಜ್ಞರು ಎರಡು ಜಾಗ ಗುರುತಿಸಿದ್ದರು. ಮೊದಲನೇ ಜಾಗದಲ್ಲಿ ಪೈಪ್‌ಲೈನ್‌ ಅಡ್ಡಬಂದ ಕಾರಣ ಕೆಲಸ ನಿಲ್ಲಿಸಿ ಪಕ್ಕದಲ್ಲೇ ಗುರುತಿಸಿದ್ದ ಇನ್ನೊಂದು ಜಾಗದಲ್ಲಿ ಕೊರೆಯಲಾಯಿತು. ಆದರೆ 700 ಅಡಿ ಆಳಕ್ಕೆ ಹೋದರೂ ನೀರು ಲಭಿಸದ ಕಾರಣ ಕೊಳವೆಬಾವಿ ಕೊರೆಯುವ ಯತ್ನವನ್ನು ಕೈಬಿಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next