Advertisement

ನಾಲ್ವರು ಕೋವಿಡ್-19 ಸೋಂಕಿತರು ಗುಣಮುಖ: ಚಪ್ಪಾಳೆ ತಟ್ಟಿ ಮನೆಗೆ ಬೀಳ್ಕೊಡುಗೆ

03:12 PM Apr 12, 2020 | keerthan |

ಚಿಕ್ಕಬಳ್ಳಾಪುರ: ಮಹಾಮಾರಿ ಕೋವಿಡ್-19  ಸೋಂಕಿನಿಂದ ಇಲ್ಲಿನ ಕೋವಿಡ್-19 ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ನಾಲ್ವರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

Advertisement

ನಗರದ ಹಳೆ ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ನಿಗಾ ಘಟಕದಲ್ಲಿ ಇದ್ದು ಇತ್ತೀಚೆಗೆ ನಡೆಸಿದ ಎಲ್ಲಾ ವೈದ್ಯಕೀಯ ಪರೀಕ್ಷೆಗಳಲ್ಲಿ‌ ಕೋವಿಡ್-19 ಸೋಂಕಿನ ನೆಗೆಟಿವ್ ಬಂದಿದ್ದರಿಂದ‌ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಕೋವಿಡ್-19 ಐಸೋಲೇಷನ್ ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು, ದದಾದಿಯರು, ಆರೋಗ್ಯ ಇಲಾಖೆ‌ ಸಿಬ್ಬಂದಿ ಗುಣಮುಖರಾದವರಿಗೆ‌ ಚಪ್ಪಾಳೆ ‌ತಟ್ಟಿ ಭವ್ಯವಾಗಿ ಬಿಳ್ಕೊಟ್ಟರು. ಇದೇ ವೇಳೆ‌  ಮನೆಗೆ ಹೊರಟವರಿಗೆ ಹೂಗುಚ್ಚದ ಜೊತೆಗೆ ಹಣ್ಣು ಹಂಪಲು‌ ನೀಡಿ ಶುಭ‌ ಹಾರೈಸಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ‌ ಇದುವರೆಗೂ 12 ಕೋವಿಡ್ ಸೋಂಕಿತ ಪ್ರಕರಣಗಳು ಕಂಡು ಬಂದು ಆ ಪೈಕಿ ಒಬ್ಬ ಮಹಿಳೆ ಮತೃಪಟ್ಟಿದ್ದಾರೆ. ಉಳಿದ 11 ಪ್ರಕರಣಗಳ ಪೈಕಿ ನಾಲ್ವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next