Advertisement

ಹೈಕೋರ್ಟಿನ 4 ಸಿಜೆಗಳಿಗೆ ಸುಪ್ರೀಂ ಕೋರ್ಟ್‌ಭಡ್ತಿ; ಪ್ರಮಾಣ ವಚನ

12:32 PM Nov 02, 2018 | Team Udayavani |

ಹೊಸದಿಲ್ಲಿ : ಭಡ್ತಿ ಪಡೆದಿರುವ ಹೈಕೋರ್ಟಿನ  ನಾಲ್ವರು ಮುಖ್ಯ ನ್ಯಾಯಾಧೀಶರು (CJ)  ಇಂದು ಶುಕ್ರವಾರ ಬೆಳಗ್ಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಸುಪ್ರೀಂ ಕೋರ್ಟಿನ ಒಟ್ಟು ನ್ಯಾಯಾಧೀಶರ ಸಂಖ್ಯೆ ಈಗ 28ಕ್ಕೇರಿತು.

Advertisement

ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರು ನೂತನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿರುವ ಜಸ್ಟಿಸ್‌ ಹೇಮಂತ್‌ ಗುಪ್ತಾ, ಅಜಯ್‌ ರಸ್ತೋಗಿ, ಎಂ ಆರ್‌ ಶಾ ಮತ್ತು ಸುಭಾಷ್‌ ರೆಡ್ಡಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. 

ಕೇಂದ್ರ ಸರಕಾರ ನಾಲ್ವರು ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ಹೆಸರುಗಳನ್ನು ಭಡ್ತಿಗೆ ಶಿಫಾರಸು ಮಾಡಿದ 48 ತಾಸುಗಳ ಒಳಗೆ ಅದನ್ನು ಸ್ವೀಕರಿಸಲಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next