Advertisement
ಸ್ವೆಟ್ ಶರ್ಟ್ ಎಂದರೆ ಅಂಗಿಯಂತೆ ತೊಡಬಹುದಾದ ಸ್ವೆಟರ್. ತಲೆಗವಸು ಇರುವ ಸ್ವೆಟ್ ಶರ್ಟ್ ಅನ್ನು “ಹುಡಿ’ ಎಂದು ಕರೆಯುತ್ತಾರೆ. ಇದು ನಿನ್ನೆ, ಮೊನ್ನೆ ಬಂದಿದ್ದಲ್ಲ. 1970ರಲ್ಲಿಯೇ ಈ ಶೈಲಿ ಪ್ರಸಿದ್ಧವಾಗಿತ್ತು. ಆದರೂ, “ಹುಡಿ’ ಎಂಬ ಪದ ಫ್ಯಾಷನ್ ಲೋಕಕ್ಕೆ ಪದಾರ್ಪಣೆ ಮಾಡಿದ್ದು 1990ರಲ್ಲಿ. ಇದೀಗ ಈ ಹುಡಿ ಹೊಸ ಅವತಾರದಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ಇನ್ನು ಹುಡಿ ಮೇಲೆ ಜಿಂಕೆಯ ಕೊಂಬುಗಳನ್ನೂ ಕಾಣಬಹುದು. ಇದೂ ಸಾಲದು ಅಂತ ಮಾಟಗಾತಿಯ ಕಿವಿ, ಬಾವಲಿಯ ಕಿವಿ, ಕಪ್ಪು ಬೆಕ್ಕಿನ ಕಿವಿಗಳನ್ನು ಹೋಲುವ ಕಿವಿಗಳುಳ್ಳ ಹುಡಿಗಳೂ ಲಭ್ಯ! ಇವು ಗಾತ್ ಶೈಲಿಯ ವಿನ್ಯಾಸಗಳಾಗಿದ್ದು, ವಿದೇಶಗಳಲ್ಲಿ ಹ್ಯಾಲೋವೀನ್ ಸಮಯದಲ್ಲಿ ಇವುಗಳಿಗೆ ತುಂಬ ಬೇಡಿಕೆ ಇರುತ್ತದೆ. ಇದೀಗ ಇದರ ಅಲೆ ನಮ್ಮ ದೇಶದಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂಥ ಹುಡಿಗಳು ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿವೆ. ನಮಗೆ ಬೇಕಾದಂತೆ ಹೊಲಿದು ಕೊಡುವ ಕಸ್ಟಾಮೈಸ್ಡ್ ಆಯ್ಕೆಗಳು ಭಾರತದಲ್ಲಿ ಈಗಿನ್ನೂ ಲಭ್ಯವಿಲ್ಲ. ಆದರೆ, ಇವು ಮುಂದಿನ ದಿನಗಳಲ್ಲಿ ಸುಲಭದಲ್ಲಿ ಸಿಗಲಿವೆ.
Related Articles
ಕಿವಿಗಳಿರುವ ಹುಡಿಗಳು ಮಹಿಳೆಯರು, ಪುರುಷರು ಮತ್ತು ಮಕ್ಕಳ ಉಡುಗೆಯ ಸೆಕ್ಷನ್‌ನಲ್ಲಿ ಸಿಗುತ್ತವೆ. ಫ್ಯಾನ್ಸಿ ಡ್ರೆಸ್‌ನಲ್ಲಿ (ಛದ್ಮವೇಷ) ಮಕ್ಕಳು ಸಾಮಾನ್ಯವಾಗಿ ಉಡುತ್ತಿದ್ದ ಇಂಥ ಬಟ್ಟೆಗಳನ್ನು ಇದೀಗ ಕ್ಯಾಶುಯಲ್ ಆಗಿಯೂ ತೊಡಬಹುದು. ಇವನ್ನು ಜೀ®Õ… ಪ್ಯಾಂಟ್, ಸ್ಕರ್ಟ್ (ಲಂಗ), ಶಾರ್ಟ್ಸ್, ಪೆಡಲ್ ಪುಷರ್ಸ್ (ಮುಕ್ಕಾಲು ಪ್ಯಾಂಟ್), ಡಂಗ್ರೀಸ್ ಮುಂತಾದ ವೆಸ್ಟರ್ನ್ (ಪಾಶ್ಚಾತ್ಯ) ಉಡುಪುಗಳ ಜೊತೆ ಧರಿಸಬಹುದು. ಇಂಥ ಹುಡಿಗಳನ್ನು ಹೆಚ್ಚಾಗಿ ಕ್ಯಾಶುಯಲ್ ಪ್ಯಾಂಟ್, ಶರ್ಟ್ ಜೊತೆ ಉಡುತ್ತಾರೆ. ಹಾಗೆಂದು ಕುರ್ತಾ, ಚೂಡಿದಾರ ಅಥವಾ ಇತರ ಉಡುಪುಗಳ ಜೊತೆ ಇಯರ್ ಹುಡಿ ತೊಡಬಾರದೆಂದು ಏನೂ ಇಲ್ಲ.
Advertisement
ಕಾಲೇಜಿಗೂ “ಹುಡಿ’ಸ್ವೆಟರ್ ಅನ್ನು ಕೇವಲ ಚಳಿಗಾಲದಲ್ಲಿ ಮಾತ್ರ ತೊಡಬೇಕಾಗುತ್ತದೆ. ಆದರೆ, ಸ್ವೆಟ್ ಶರ್ಟ್ ಅನ್ನು ಬೇಸಿಗೆ ಸೇರಿದಂತೆ ಯಾವುದೇ ಕಾಲದಲ್ಲೂ ತೊಡಬಹುದು. ದಿನ ನಿತ್ಯ ತೊಡುವ ಕಾಲೇಜು ದಿರಿಸಿನ ಜೊತೆ ಇಂಥ ಹುಡಿಗಳು ಅಂದವಾಗಿ ಕಾಣುತ್ತವೆ. ಲೆಗಿಂಗÕ… ಮೇಲೂ ಇಯರ್ ಹುಡಿ ತೊಡಬಹುದು. ಹುಡಿಯ ಮೇಲಿರುವ ಕಿವಿಗಳ ಬಣ್ಣವನ್ನೇ ಹೋಲುವ ಬಣ್ಣದ ಲೆಗಿಂಗ್ಸ್ ಧರಿಸಿದರೆ, ನೀವು ಖಂಡಿತವಾಗಿ ಕ್ಯೂಟ್ ಆಗಿ ಕಾಣಿಸ್ತೀರಿ. ಪ್ರತಿ ಉಡುಗೆಗೆ ಮ್ಯಾಚಿಂಗ್ ಸ್ವೆಟರ್ ಖರೀದಿಸುವುದು ಒಳ್ಳೆಯ ಐಡಿಯಾ ಅಲ್ಲ. ಅದು ಸಾಧ್ಯವೂ ಇಲ್ಲ. ಹಾಗಾಗಿ, ಇಂಥ ಕ್ಯೂಟ್ ಹುಡಿಗಳನ್ನು ಧರಿಸಿ ಈ ಚಳಿಗಾಲದಲ್ಲಿ ಆರಾಮಾಗಿ ಓಡಾಡಿ. ಅದಿತಿಮಾನಸ ಟಿ.ಎಸ್.