Advertisement

ಹೆಚ್ಚಿದ ಕೋವಿಡ್ : ಕಾಫಿ ನಾಡಿನಲ್ಲಿ ನಾಲ್ಕು ದಿನ ಕಠಿಣ ಲಾಕ್ ಡೌನ್

05:40 PM May 19, 2021 | Team Udayavani |

ಚಿಕ್ಕಮಗಳೂರು :  ಕಾಫಿನಾಡಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿಲ್ಲಿ ನಾಲ್ಕು ದಿನಗಳ (ಮೇ 20ರಿಂದ ಮೇ 24ರ ವರೆಗೆ ) ಕಾಲ  ಕಠಿಣ ಲಾಕ್ ಡೌನ್ ಗೆ ಜಿಲ್ಲಾಡಳಿತ ಮುಂದಾಗಿದೆ.

Advertisement

ನಾಳೆ ಬೆಳಗ್ಗೆ 10ರಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ತಿಳಿಸಿದ್ದಾರೆ. ಈ ಅವಧಿಯಲ್ಲಿ ತುರ್ತು ಮೆಡಿಕಲ್ ಸೇವೆ ಹೊರತುಪಡಿಸಿ ವಾಹನ ಸಂಚಾರ ಕಂಪ್ಲೀಟ್ ಬಂದ್ ಆಗಲಿವೆ.  ಹಾಗೂ ಅನುಮತಿ ಪಡೆದಿರೋ ಮದುವೆ ಕಾರ್ಯಕ್ರಮಗಳಿಗೆ 10 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next