Advertisement
ಎ. 10ರಂದು ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.80 ಮೀ.ಮಾತ್ರ ಲಭ್ಯವಿದ್ದು, ಮಳೆಗಾಲ ಆರಂಭವಾಗುವ ಜೂನ್ ಮೊದಲನೇ ವಾರದವರೆಗೆ ನೀರನ್ನು ಸಮರ್ಪಕವಾಗಿ ಬಳಸಿ ವಿತರಿಸ ಬೇಕಿದೆ. ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಿರಲು ಮುಂದಿನ ದಿನದಲ್ಲಿ 4 ದಿನಗಳ ಒಟ್ಟು 96 ಗಂಟೆ ಅವಧಿಯಲ್ಲಿ ಎಲ್ಲ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಬಳಿಕ 2 ದಿನಗಳ 48 ಗಂಟೆಗಳ ಅವಧಿಯಲ್ಲಿ ನೀರು ಸರಬರಾಜು ಸಂಪೂರ್ಣ ಸ್ಥಗಿತ ಮಾಡಲಾಗುತ್ತದೆ.
Related Articles
2016ರ ಆರಂಭದ ತಿಂಗಳಿನಿಂದ ಮಂಗಳೂರು ಮಹಾನಗರ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸುವಂತಾಗಿತ್ತು. ತುಂಬೆ ಡ್ಯಾಂನಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿ, ನಗರದಲ್ಲಿ ಟ್ಯಾಂಕರ್ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಅದೂ ಪೂರ್ಣ ವಾಗಿ ಸಾಧ್ಯವಾಗದಾಗ ಲಕ್ಯಾ ಡ್ಯಾಂ ನೀರನ್ನು ತರಿಸಲಾಗಿತ್ತು. ಇದರಿಂದ ಎಚ್ಚೆತ್ತ ಮಂಗಳೂರು ಪಾಲಿಕೆಯು 2017ರಲ್ಲಿ ಪ್ರತೀ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್ ಆರಂಭಿಸಿತ್ತು.
Advertisement
ನೀರು ಮಿತವಾಗಿ ಬಳಸಿಸಾರ್ವಜನಿಕರು ಮನೆಯಲ್ಲಿನ ಕೈತೋಟಗಳಿಗೆ ವಾಹನ ತೊಳೆಯಲು ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು ಹಾಗೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು. ತಗ್ಗು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿರುವ ಬಳಕೆ ದಾರರು ಕುಡಿಯುವ ನೀರನ್ನು ಮಿತವಾಗಿ ಬಳಸಿ, ಮನೆಯ ಗೇಟ್ ವಾಲ್Ì ಗಳನ್ನು ಬಂದ್ ಮಾಡಿ, ಎತ್ತರದ ಪ್ರದೇಶದಲ್ಲಿನ ಸಾರ್ವಜನಿಕರಿಗೆ ನೀರು ಪೂರೈಕೆಯಾಗುವಂತೆ ಸಹಕರಿಸುವಂತೆ ಮನಪಾ ಕೋರಿದೆ. ಮಳೆ ಬರುವವರೆಗೂ ರೇಷನಿಂಗ್
ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಬಾರದೆಂಬ ಕಾರಣಕ್ಕೆ 4 ದಿನ ನೀರು ಪೂರೈಕೆ ಮಾಡಲಾಗುವುದು. ಬಳಿಕ 48 ಗಂಟೆಗಳ ಅವಧಿಯಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು. ಮಳೆ ಬಂದು ನದಿಯಲ್ಲಿ ಒಳಹರಿವು ಕಾಣುವವರೆಗೂ ನೀರು ರೇಷ ನಿಂಗ್ ಮುಂದುವರಿಯಲಿದೆ.
- ನಾರಾಯಣಪ್ಪ,
ಆಯುಕ್ತರು, ಮನಪಾ