Advertisement

ಹಟ್ಟಿ ಮೇಲೆ ಜರಿದು ಬಿದ್ದ ಗುಡ್ಡ: ನಾಲ್ಕು ಹಸುಗಳ ಸಾವು; ಒಂದರ ರಕ್ಷಣೆ

07:00 AM Aug 06, 2017 | |

ಕಡಬ: ಮಳೆಯಿಂದಾಗಿ ಗುಡ್ಡ ಜರಿದು ದನದ ಹಟ್ಟಿಯ ಮೇಲೆ ಮಣ್ಣು ಬಿದ್ದ ಪರಿಣಾಮ ಮರ್ದಾಳದ 102 ನೆಕ್ಕಿಲಾಡಿ ಗ್ರಾಮದ ಕುಡಾಲ ನಿವಾಸಿ ಸುಭಾಸ್‌ ರೈ ಅವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿದ್ದ 5 ಜಾನುವಾರುಗಳ ಪೈಕಿ 4 ಜಾನುವಾರುಗಳು ಮಣ್ಣಿನಡಿ ಸಿಲುಕಿ ಮೃತಪಟ್ಟಿವೆ. ಘಟನೆ ಶನಿವಾರ ಸಂಜೆ ಸಂಭವಿಸಿದೆ.

Advertisement

ಮಣ್ಣು ಜರಿದು ಬಿದ್ದುದರಿಂದ ದನದ ಹಟ್ಟಿ ಸಂಪೂರ್ಣ ನಾಶವಾಗಿದೆ. 1 ಹಾಲು ಕರೆಯುವ ಹಸು, 1 ಗಬ್ಬದ ಹಸು,1 ದೊಡ್ಡ ಗಡಸು ಹಾಗೂ 1 ಕರು ಮೃತಪಟ್ಟರೆ, 1 ದನವನ್ನುಸ್ಥಳೀಯರು ಮಣ್ಣಿನಡಿಯಿಂದ ಹೊರತೆಗೆದು ರಕ್ಷಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಮರ್ದಾಳದ ಯುವಕರು ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಸುಮಾರು ಒಂದೂವರೆ ತಾಸು ಕಾಲ ಜೆಸಿಬಿ ಯಂತ್ರ ಬಳಸಿ ಕಾರ್ಯಾಚರಣೆ ನಡೆಸಿ ದನಗಳ ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಯಿತು.ಘಟನೆಯಿಂದಾಗಿ ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮರ್ದಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎ.ಬಿ. ಮನೋಹರ ರೈ, ಕೆಎಂಎಫ್‌ ಪಶು ವೈದ್ಯಾಧಿ
ಕಾರಿ ಡಾ| ಕಾರ್ತಿಕ್‌, ವಿಸ್ತರಣಾಧಿಕಾರಿ ಮಂಜುನಾಥ್‌, ಮರ್ದಾಳ ಗ್ರಾ.ಪಂ. ಅಧ್ಯಕ್ಷೆ ಲಲಿತಾ ರೈ ಮೈಕಾಜೆ ಮುಂತಾದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next