Advertisement

ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕೋವಿಡ್-19 ಸೋಂಕಿತರು ಗುಣಮುಖ

06:32 PM Apr 06, 2020 | Team Udayavani |

ಮಂಗಳೂರು: ಜಿಲ್ಲೆಯ ಕೋವಿಡ್-19 ಸೋಂಕಿತರ ಪೈಕಿ ನಾಲ್ವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Advertisement

ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕೋವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಭಟ್ಕಳ ಮೂಲದ ಓರ್ವ ಸೋಂಕಿತ,  ಮೂರು ಮಂದಿ ಕಾಸರಗೋಡು ನಿವಾಸಿಗಳು ವೆನ್ಲಾಕ್ ಆಸ್ಪತ್ರೆಯಲ್ಲಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇವರಿಗೆ ಮುಂದೆ 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿಇದುವರೆಗೆ  ಒಟ್ಟು 12 ಮಂದಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿತ್ತು. ಇನ್ನುಳಿದ ಎಂಟು ಮಂದಿ ಕೋವಿಡ್ ಸೋಂಕಿತರಿಗೆ ಜಿಲ್ಲೆಯ ಕೋವಿಡ್ ವಿಶೇಷ ಆಸ್ಪತ್ರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next