ಜಾದೂಗಾರರು ಬೆರಗು ಮೂಡಿಸುತ್ತಿರಬೇಕು. ಪ್ರೇಕ್ಷಕರ ಕಣ್ಣಲ್ಲಿ ಕುತುಹೂಲದ ದೀಪ ಹೊತ್ತಿಸುತ್ತಿರಬೇಕು. ಅದಕ್ಕೆ ನಾನಾ ಮಾರ್ಗಗಳಿವೆ. ಅದರಲ್ಲಿ ಎಕ್ಕಗಳ ಮ್ಯಾಜಿಕ್ ಕೂಡ ಒಂದು. ನಾಲ್ಕು ಎಕ್ಕಗಳ ಮ್ಯಾಜಿಕ್‌ನಲ್ಲಿ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಒಂದನ್ನು ಈಗ ಹೇಳಿ ಕೊಡುತ್ತೇನೆ. ಇದಕ್ಕೆ ಪೂರ್ವ ತಯಾರಿಯಾಗಿ ಒಂದು ಇಸ್ಪೀಟ್ ಪ್ಯಾಕಿನಲ್ಲಿ ಇರುವ ಕಾರ್ಡ್‌ಗಳಲ್ಲಿ ನಾಲ್ಕು ಎಕ್ಕಗಳನ್ನು ತೆಗೆದುಕೊಳ್ಳಿ.
ಉಳಿದವನ್ನು ಕಾರ್ಡ್‌ಗಳ ಮೇಲೆ ಇಟ್ಟು ಎಲ್ಲಾ ಕಾರ್ಡ್‌ಗಳನ್ನು ಪ್ಯಾಕ್‌ನೊಳಗೆ ಇಡಿ. ಈ ಟ್ರಿಕ್ಕನ್ನು ಪ್ರದರ್ಶಿಸಲು ನಿಮ್ಮ ಸ್ನೇಹಿತರನ್ನೆಲ್ಲ ಒಂದು ಮೇಜಿನ ಮುಂಭಾಗದಲ್ಲಿ ನಿಂತಿರಲು ಹೇಳಿ. ನಿಮ್ಮ ಬಳಿ ಇರುವ ಮೊದಲೇ ಸಿದ್ಧಮಾಡಿಕೊಂಡಿರುವ ಕಾರ್ಡ್‌ಗಳನ್ನು ಪ್ಯಾಕಿನಿಂದ ತೆಗೆದು ಅವುಗಳ ಮುಖ ಕೆಳಗಿರುವಂತೆ ಮೇಜಿನ ಮೇಲೆ ಇಡಿ. ನೆನಪಿಡಿ: ಆ ಕಾರ್ಡ್‌ಗಳ ಪೈಕಿ ಮೇಲ್ಭಾಗದಲ್ಲಿ ಇರುವ ನಾಲ್ಕು ಕಾರ್ಡ್‌ಗಳು ಎಕ್ಕಗಳಾಗಿವೆ.
ಈಗ ಯಾರಾದರೂ ಒಬ್ಬ ಸ್ನೇಹಿತನಿಗೆ ಆ ಕಾರ್ಡ್‌ಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುವಂತೆ ಹೇಳಿ. ನೀವು ಎಕ್ಕಗಳು ಇರುವ ಗುಂಪನ್ನು ನೆನಪಿಟ್ಟುಕೊಳ್ಳಿ.ಯಾವ ಕಾರಣಕ್ಕೂ ಮರೆಯಬಾರದು. ಇನ್ನೊಬ್ಬ ಸ್ನೇಹಿತನನ್ನು ಕರೆದು ಆ ಎರಡು ಗುಂಪುಗಳನ್ನು ವಿಂಗಡಿಸಿ, ಅದನ್ನು ನಾಲ್ಕು ಗುಂಪುಗಳನ್ನಾಗಿ ಮಾಡಲು ಹೇಳಿ. ಈಗಲೂ ಎಕ್ಕಗಳು ಇರುವ ಗುಂಪು ನಿಮ್ಮ ತಲೆಯಲ್ಲಿರಬೇಕು.
ಕಾರ್ಡ್‌ಗಳು ಕಮ್ಮಿ ಇರುವ ಗುಂಪಿನ ಮೇಲೆ ಎರಡು ಎಕ್ಕಗಳನ್ನು ಇಡಿ. ಈಗ ಎರಡು ಗುಂಪುಗಳ ಮೇಲೆ ತಲಾ ಎರಡೆರಡು ಎಕ್ಕಗಳಿರುವುದನ್ನು ನೆನಪಿಟ್ಟುಕೊಳ್ಳಿ. ಇಲ್ಲೊಂದು ಸಣ್ಣ ನಾಟಕ ಆಡಬೇಕಾಗುತ್ತದೆ. ಉಹೂಂ, ಆದರೂ, ಗುಂಪುಗಳ ಎತ್ತರ ಸರಿಯಾಗಿಲ್ಲ ಎಂದು ಹೇಳುತ್ತಾ ಎರಡು ಗುಂಪುಗಳ ಮೇಲಿನ ಒಂದೊಂದು ಎಕ್ಕವನ್ನು ತೆಗೆದು ಉಳಿದ ಎರಡು ಗುಂಪುಗಳ ಮೇಲೆ ಒಂದೊಂದನ್ನು ಇಡಿ.
ಈಗ ನಾಲ್ಕೂ ಗುಂಪುಗಳ ಮೇಲೆ ಒಂದೊಂದು ಎಕ್ಕ ಇರುವುದನ್ನು ಖಚಿತ ಪಡಿಸಿಕೊಳ್ಳಿ. “ಹೋಕಸ್ ಪೋಕಸ್’ ಅನ್ನುತ್ತಾ ಮೇಲಿನ ಕಾರ್ಡ್‌ಅನ್ನು ಮುಖ ಮೇಲಾಗುವಂತೆ ತಿರುಗಿಸಿ. ಒಂದೊಂದು ಗುಂಪಿನ ಮೇಲೂ ಒಂದೊಂದು ಎಕ್ಕ ಇರುವುದನ್ನು ನೋಡಿ ನಿಮ್ಮ ಸ್ನೇಹಿತರು ಮೂಗಿನ ಮೇಲೆ ಬೆರಳಿಡುವುದು ಗ್ಯಾರೆಂಟಿ.
* ಉದಯ್ ಜಾದೂಗಾರ್