ಸಂಬಲ್‌ಪುರ, ಒಡಿಶಾ : ಬಾರಗಢ ಜಿಲ್ಲೆಯಲ್ಲಿ ನಕಲಿ ಫೇಸ್‌ಬುಕ್ ಖಾತೆಯ ಮೂಲಕ ಹುಡುಗಿಯೊಬ್ಬಳನ್ನು ಭೇಟಿ ಮಾಡಿಸುವ ಆಮಿಷ ಒಡ್ಡಿ ಉದ್ಯಮಿಯಿಂದ 6 ಲಕ್ಷ ರೂ. ದರೋಡೆ ಮಾಡಿದ ಆರೋಪದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಪೊಲೀಸರು 1.52 ಲಕ್ಷ ರೂ. ನಗದು, ಎರಡು ಬೈಕ್, ಮೂರು ಮೊಬೈಲ್ ಫೋನ್ ಮತ್ತು ಹರಿತವಾದ ಆಯುಧವೊಂದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಖದೀಮರು ಹಾಕಿದ್ದ “ಹುಡುಗಿ ಆಮಿಷ’ದ ಬಲೆಗೆ ಬಿದ್ದ ಉದ್ಯಮಿಯ ಹೆಸರು ಬಿಕಾಶ್ ಅಗ್ರವಾಲ್ (32); ಇವರು ನೌಪಾಡಾ ಜಿಲ್ಲೆಯ ನಿವಾಸಿಯಾಗಿದ್ದು ಹೋಲ್‌ಸೇಲ್ ವ್ಯಾಪಾರಿ.
ಬಾರಗಢ ಜಿಲ್ಲೆಯ ಪೈಕಾಮಾಲ್ ಎಂಬಲ್ಲಿನ ತನ್ನ ಗ್ರಾಹಕರನ್ನು ಭೇಟಿಯಾಗಿ ಅವರಿಂದ ಆರು ಲಕ್ಷ ರೂ. ವಹಿವಾಟು ಹಣವನ್ನು ಪಡೆದುಕೊಂಡ ಬಿಕಾಶ್ ಅಗ್ರವಾಲ್, ನಕಲಿ ಫೇಸ್ ಬುಕ್ ಖಾತೆಯ ಮೂಲಕ ಪರಿಚಿತಳಾಗಿದ್ದ “ನಕಲಿ ಹುಡುಗಿ’ಯನ್ನು ಭೇಟಿಯಾಗಲು ಹೋಗಿದ್ದರು.
ಪೇಸ್ ಬುಕ್ ಮೆಸೆಂಜರ್ ಪಂಕಜ್ ಮಾಝಿ ಎಂಬಾತನನ್ನು ಕಾಣಲು ಮನಭಾಂಗ್ ಡ್ಯಾಮ್‌ಗೆ ಹೋಗಿದ್ದ ಇವರನ್ನು ಬೈಕ್‌ನಲ್ಲಿ ಬಂದಿದ್ದ ನಾಲ್ವರು ಖದೀಮರು ಇವರ ಬಳಿ ಇದ್ದ 6 ಲಕ್ಷ ರೂ. ಹಣವನ್ನು ಕಿತ್ತುಕೊಂು ಪರಾರಿಯಾದರು.