ಬೆಂಗಳೂರು: ಮದ್ಯದ ಅಮಲಿನಲ್ಲಿ ದರೋಡೆಗೆ ಸಿದ್ಧತೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲ ನಿವಾಸಿ ಆನಂದ್ ಕುಮಾರ್ (18), ಸಂತೋಷ್ ಕುಮಾರ್ (18), ನಿತಿನ್ (20), ನಿತಿನ್ ಕುಮಾರ್ (18) ಬಂಧಿತರು. ಮತ್ತೂಬ್ಬ ಕಾನೂನು ಸಂಘರ್ಷಕ್ಕೊಳಗಾದವ ನನ್ನು ಬಂಧಿಸಲಾಗಿದೆ. ಅವರಿಂದ 18,600 ರೂ. ನಗದು, ಮೊಬೈಲ್‌ಗಳು, 2 ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ದಿಲೀಪ್ ಕುಮಾರ್ ಮತ್ತು ಸಂದೀಪ್ ಎಂಬುವರು ಕೆಲಸ ಮುಗಿಸಿಕೊಂಡು ದಿನಸಿ ತೆಗೆದುಕೊಂಡು ರಾತ್ರಿ 8.30ರ ಸುಮಾರಿಗೆ ಬೇಗೂರು ರಸ್ತೆಯ ಮುತ್ತಗ ದಹಳ್ಳಿ ಕಾಲೇಜೊಂದರ ರಸ್ತೆಯಲ್ಲಿ ನಡದುಕೊಂಡು ಹೋಗುವಾಗ ಅಡ್ಡಗಟ್ಟಿ, ಮೊಬೈಲ್, 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಕೌಟುಂಬಿಕ ಕಲಹಕ್ಕೆ ತಾನೇ ಪತಿಯನ್ನು ಕೊಲೆಗೈದು ಅಪರಿಚಿತರಿಂದ ಹಲ್ಲೆ ಎಂದು ಕಥೆ ಕಟ್ಟಿದ ಪತ್ನಿ
ಐವರು ಮದ್ಯ ವ್ಯಸನಿಗಳಾಗದ್ದು, ಮದ್ಯ ಖರೀದಿಗೆ ಹಣವಿಲ್ಲದಿದ್ದಾಗ ದರೋಡೆಗೆ ಸಂಚು ರೂಪಿಸುತ್ತಿದ್ದರು. ರಾತ್ರಿ ವೇಳೆ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಿ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿ ದ್ದರು ಎಂದು ಪೊಲೀಸರು ಹೇಳಿದರು