Advertisement

ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪನೆ ದಿನಾಚರಣೆ

12:42 PM May 20, 2022 | Team Udayavani |

ರಬಕವಿ-ಬನಹಟ್ಟಿ: ಕನ್ನಡಿಗರ ಮಾತೃಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಎಲ್ಲ ಸಾಹಿತಿಗಳ, ಸಾಹಿತ್ಯಾಭಿಮಾನಿಗಳ, ಸಮಸ್ತ ಕನ್ನಡ ಮನಸ್ಸುಗಳ ಏಕೈಕ ಸಾರ್ವಭೌಮ ಸಂಸ್ಥೆಯಾಗಿದೆ ಎಂದು ಹಿರಿಯ ಸಾಹಿತಿ ಬನಹಟ್ಟಿಯ ಜಯವಂತ ಕಾಡದೇವರ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ರಬಕವಿ-ಬನಹಟ್ಟಿ ತಾಲೂಕು ಘಟಕದವರು ಬನಹಟ್ಟಿಯ ಡಾ| ಸ.ಜ.ನಾಗಲೋಟಿಮಠ ಸಾಹಿತ್ಯ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ಸಂಸ್ಥಾಪನಾ ದಿನಾಚರಣೆಯನ್ನು ಕವನ ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಲಿಂಗಪುರದ ಹಿರಿಯ ಸಾಹಿತಿ ಗುರುರಾಜ ಖಾಸನೀಸ ಅವರು ಕನ್ನಡ ಸಾಹಿತ್ಯ ಪರಿಷತ್‌ ಒಂದು ಅವಲೋಕನ ವಿಷಯವಾಗಿ ಉಪನ್ಯಾಸ ನೀಡಿ ಕನ್ನಡ ನಾಡು ನುಡಿ ಸಂಸ್ಕೃತಿ, ಸಾಹಿತ್ಯ ಮತ್ತು ಗಡಿನಾಡ ಕನ್ನಡಿಗರ ಬಗ್ಗೆಯೂ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ಸಾಹಿತ್ಯ ಪರಿಷತ್ತು ಜನಪರವಾಗಿ ಬೆಳೆದಿದೆ ಎಂದರು.

ತಾಲೂಕಾ ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜಾನಪದ ಸಾಹಿತಿ ರಬಕವಿಯ ರಾಮಣ್ಣ ಕೊಣ್ಣೂರ, ಹಿರಿಯ ಸಾಹಿತಿ ಬನಹಟ್ಟಿಯ ಮಲ್ಲಿಕಾರ್ಜುನ ಹುಲಗಬಾಳಿ, ಸಾಹಿತಿ ಮಧುಕೇಶ್ವರ ಬೆಳಗಲಿಯವರನ್ನು ಸನ್ಮಾನಿಸಲಾಯಿತು.

ರಾಮಣ್ಣ ಕೊಣ್ಣೂರ ಅವರು ಸನ್ಮಾನಿತರ ಪರವಾಗಿ ಮಾತನಾಡಿ, ಜಾನಪದ ಗೀತೆ ಹಾಡಿ ರಂಜಿಸಿದರು. ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಪ್ರಭು ಹಟ್ಟಿ, ಹಿರಿಯ ಸಾಹಿತಿಗಳಾದ ಜಿ.ಎಸ್‌.ವಡಗಾಂವಿ, ಎಂ.ಎಸ್‌. ಬದಾಮಿ, ಡಾ.ಡಿ.ಎ. ಬಾಗಲಕೋಟ, ಚಂದ್ರಪ್ರಭಾ ಬಾಗಲಕೋಟ, ಕಾಡಣ್ಣ ಹೊಸಟ್ಟಿ, ಮಹಾಲಿಂಗಪುರದ ಗುರಲಿಂಗಪ್ಪ ಅಮ್ಮಣಗಿ, ತೇರದಾಳ ಕಸಾಪ ವಲಯಾಧ್ಯಕ್ಷ ಗಂಗಾಧರ ಮೋಪಗಾರ, ಮಹಾಲಿಂಗಪುರ ವಲಯಾಧ್ಯಕ್ಷ ಬಸವರಾಜ ಮೇಟಿ, ಜಿಲ್ಲಾ ಕಾನಿಪ ಕಾರ್ಯದರ್ಶಿ ಮಲ್ಲಿಕಾರ್ಜುನ ತುಂಗಳ, ಸದಾಶಿವ ದೊಡ್ಡಪ್ಪಗೋಳ, ಎಸ್‌.ಆರ್‌.ರಾವಳ, ತಾಲೂಕು ಕಸಾಪ ಕೋಶಾಧ್ಯಕ್ಷ ಡಿ.ಬಿ. ಜಾಯಗೊಂಡ, ಸಂಘಟನಾ ಕಾರ್ಯದರ್ಶಿ, ಮಹಾಶಾಂತ ಶೆಟ್ಟಿ, ಸಿ.ಬಿ. ಪೂಜಾರಿ, ಶೈಲಾ ಮಿರ್ಜೆ, ಶಾಂತಾ ಪ್ರಕಾಶ ಮಂಡಿ ಪಾಲ್ಗೊಂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next