Advertisement
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷರಿಂದ ಭಾರತ ದೇಶದಸ್ವಾತಂತ್ರ್ಯಪಡೆದರು. ಸ್ವಾತಂತ್ರ್ಯಕ್ಕಾಗಿ ಅನೇಕ ಕಾಂಗ್ರೆಸ್‌ಮುಖಂಡರು ತಮ್ಮ ಜೀವನವನ್ನೇ ಮುಡುಪಿಟ್ಟಿದ್ದರು ಎಂದರು.
Related Articles
Advertisement
ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ 136ನೇ ಕಾಂಗ್ರೆಸ್‌ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಭಾರತ ದೇಶವುಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆಇತ್ತು. ಆದರೆ ನಮ್ಮ ದೇಶವು ಜಗತ್ತಿನಲ್ಲಿ4ನೇ ಸ್ಥಾನ ಪಡೆದಿದ್ದು ಕಾಂಗ್ರೆಸ್ ಪಕ್ಷದನಾಯಕರಿಂದ. ದೇಶದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದ ನಂತರ ಇತಿಹಾಸವನ್ನು ತಿರುಚಿ,ಗೊಂದಲಮಯ ವಾತಾವರಣ ಸೃಷ್ಟಿಸಿ ದೊಡ್ಡದಾಗಿ ಪ್ರಚಾರ ನಡೆಸುತ್ತಿದೆ ಎಂದರು.
ಹಿರಿಯ ಮುಖಂಡರಾದ ವಿಶ್ವನಾಥ ಪಾಟೀಲ, ಬಸವಣ್ಣ ದೇಶಮುಖ, ಶಿವರಾಜದೇಗಲಮಡಿ, ಹುಸೇನ ಡ್ರೆ„ವರ್, ಸಾಯಬಣ್ಣಮಾಸ್ಟರ್, ಖಾನಸಾಬ್ ಪೋಲಕಪಳ್ಳಿ,ಬಾಬುಮಿಯ್ನಾ ಅವರನ್ನು ಸನ್ಮಾನಿಸಲಾಯಿತು. ಕೆ.ಎಂ. ಬಾರಿ ಮಾತನಾಡಿದರು. ಬಸವರಾಜಮಲಿ, ಗೋಪಾಲರಾವ್ ಕಟ್ಟಿಮನಿ, ಆರ್.ಗಣಪತರಾವ್, ಶಬ್ಬೀರ ಅಹೆಮದ್, ಜಗನ್ನಾಥಕಟ್ಟಿ, ಮಲ್ಲಿಕಾರ್ಜುನ ಭೂಶೆಟ್ಟಿ, ಬಸವರಾಜಕಡಬೂರ, ಶಿವಕುಮಾರ ಕೊಳ್ಳುರ, ಅಬ್ದುಲ್‌ಬಾಸೀತ್, ಉಲ್ಲಾಸಕುಮಾರ, ವೀರಶೆಟ್ಟಿಪಾಟೀಲ ಇನ್ನಿತರರಿದ್ದರು. ತಾಲೂಕು ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಅನಿಲ ಕುಮಾರ ಜಮಾದಾರ ಸ್ವಾಗತಿಸಿದರು, ಯುವ ಮುಖಂಡ ಅಮರ ಲೋಡನೋರ ನಿರೂಪಿಸಿದರು, ಸಂತೋಷ ಗುತ್ತೆದಾರ ವಂದಿಸಿದರು.