Advertisement

ಸಂಸ್ಥಾಪಕರ ದಿನಾಚರಣೆ, ಶೈಕ್ಷಣಿಕ ಅನುದಾನ ವಿತರಣೆ

11:01 PM Jun 08, 2019 | sudhir |

ಬೆಳ್ಮಣ್‌: ಜೀವನದಲ್ಲಿ ಯಶಸ್ಸು ಗಳಿಸಲು ವಿದ್ಯೆ ಅತ್ಯಂತ ಆವಶ್ಯಕ. ಸಂಸ್ಕಾರಯುತ ಶಿಕ್ಷಣದಿಂದ ಸುಸಂಸ್ಕೃತ ಬದುಕು ಕಟ್ಟಬಹುದು ಎಂದು ಶಿರ್ತಾಡಿ ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಹೇಳಿದರು.

Advertisement

ಶನಿವಾರ ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜಿನಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಅನುದಾನ ವಿತರಣೆ

ಮುಂಬಯಿಯ ವಿದ್ಯಾದುರ್ಗಾ ಟ್ರಸ್ಟ್‌, ಮುಂಡ್ಕೂರಿನ ವೇದಾವತಿ ರಾಘವೇಂದ್ರ ಪ್ರಭು ಪಬ್ಲಿಕ್‌ ಚಾರಿಟೆಬಲ್ ಟ್ರಸ್ಟ್‌ ನಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ದತ್ತಿ ನಿಧಿಗಳ ಮೂಲದೊಂದಿಗೆ ಸುಮಾರು 2 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಅನುದಾನದ ವಿತರಣೆ ನಡೆಯಿತು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಡಾ| ಪಿ. ಬಾಲಕೃಷ್ಣ ಆಳ್ವ ಆಧ್ಯಕ್ಷತೆ ವಹಿಸಿದ್ದರು. ಮುಂಡ್ಕೂರಿನ ವೇದಾವತಿ ರಾಘವೇಂದ್ರ ಪ್ರಭು ಪಬ್ಲಿಕ್‌ ಚಾರಿಟೆಬಲ್ ಟ್ರಸ್ಟ್‌ ನಅಧ್ಯಕ್ಷ ಬಿ. ರಮಾನಾಥ ಪ್ರಭು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.

Advertisement

ಆಡಳಿತ ಮಂಡಳಿ ಕಾರ್ಯದರ್ಶಿ ಬಿ. ಪಾಂಡುರಂಗ ಪ್ರಭು, ಕೋಶಾಧಿಕಾರಿ ಡಾ| ಪ್ರಭಾಕರ ಶೆಟ್ಟಿಗಾರ್‌, ಸದಸ್ಯರಾದ ಅಂಗಡಿಗುತ್ತು ನರಸಿಂಹ ಶೆಟ್ಟಿ, ಅಶೋಕ ಶೆಟ್ಟಿ, ಶಿಕ್ಷಣ ಪ್ರೇಮಿಗಳಾದ ಶಿವಶಂಕರ ಪ್ರಭು, ಶುಭಲಕ್ಷ್ಮೀ ಶಿವಶಂಕರ ಪ್ರಭು, ಆವಿಲ್ ಡಿ’ಸೋಜಾ,ಇನ್ನಾಬೀಡು ದಿನೇಶ್‌ ಶೆಟ್ಟಿ, ನಿವೃತ್ತ ಶಿಕ್ಷಕಿ ರತೀದೇವಿ, ಹಳೆ ವಿದ್ಯಾರ್ಥಿ ಸಂಘದ ಆಧ್ಯಕ್ಷ ಶರತ್‌, ವಿದ್ಯಾರ್ಥಿ ನಾಯಕ ಚಿಂತನ್‌, ಉಪನಾಯಕಿ ಪ್ರತೀಕ್ಷಾ ಉಪಸ್ಥಿತರಿದ್ದರು.

ಕನ್ನಡ ಅಧ್ಯಾಪಕ ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಪ.ಪೂ. ಕಾಲೇಜು ಪ್ರಾಂಶುಪಾಲ ಸುದರ್ಶನ್‌ ವೈ.ಎಸ್‌. ಪ್ರಸ್ತಾವಿಸಿದರು. ಮಾಲತೇಶ್‌ ಇಂಗಳಕಿ ಪ್ರತಿಭಾ ಪುರಸ್ಕೃತರ ವಿವರ ನೀಡಿದರು. ಪ್ರೌಢಶಾಲಾ ಹಿರಿಯ ಶಿಕ್ಷಕಿ ಸವಿತಾ ಸದಾನಂದ್‌ ವಂದಿಸಿದರು. ಉಪನ್ಯಾಸಕ ಪ್ರಕಾಶ್‌ ನಾೖಕ್‌ ಕಾರ್ಯಕ್ರಮ ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next