Advertisement

Jet Airways ಸ್ಥಾಪಕನ ಬಂಧನ- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಸೆರೆ

10:23 PM Sep 02, 2023 | Team Udayavani |

ಮುಂಬೈ: 538 ಕೋಟಿ ರೂ. ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೆಟ್‌ ಏರ್‌ವೆಸ್‌ ಸ್ಥಾಪಕ ನರೇಶ್‌ ಗೋಯಲ್‌ ಅವರನ್ನು ಶುಕ್ರವಾರ ತಡರಾತ್ರಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. “ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆಯಡಿ(ಪಿಎಂಎಲ್‌ಎ) ನರೇಶ್‌ ಗೋಯಲ್‌(74) ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು.

Advertisement

ನಂತರ ಶುಕ್ರವಾರ ತಡರಾತ್ರಿ ಅವರನ್ನು ಬಂಧಿಸಲಾಯಿತು. ಮುಂಬೈನ ಪಿಎಂಎಲ್‌ಎ ವಿಶೇಷ ಕೋರ್ಟ್‌ಲ್ಲಿ ಅವರನ್ನು ಹಾಜರುಪಡಿಸಿ, ಇಡಿ ವಶಕ್ಕೆ ಕೋರಲಾಗುವುದು’ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಗೋಯಲ್‌, ಅವರ ಪತ್ನಿ ಅನಿತಾ ಹಾಗೂ ಜೆಟ್‌ ಏರ್‌ವೆàಸ್‌ನ ಕೆಲ ಮಾಜಿ ಸಿಬ್ಬಂದಿಯ ವಿರುದ್ಧ ಸಿಬಿಐ ಮೊಕದ್ದಮೆ ದಾಖಲಿಸಿತ್ತು. ಜೆಟ್‌ ಏರ್‌ವೆàಸ್‌ ಇಂಡಿಯಾ ಲಿಮಿಟೆಡ್‌ ಕಂಪನಿಯು ಕೆನರಾ ಬ್ಯಾಂಕ್‌ನಿಂದ ಒಟ್ಟು 848.86 ಕೋಟಿ ರೂ. ಸಾಲ ಪಡೆದಿದ್ದು, ಈ ಪೈಕಿ ಇನ್ನೂ 538.62 ಕೋಟಿ ರೂ. ಬಾಕಿ ಇದೆ. ಈ ಸಂಬಂಧ ಕೆನರಾ ಬ್ಯಾಂಕ್‌ ದೂರು ದಾಖಲಿಸಿತ್ತು. ಇದನ್ನು ಸಿಬಿಐ 2011ರ ಜು.29ರಂದು ವಂಚನೆ ಎಂದು ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next