Advertisement

ಅಧ್ಯಾತ್ಮದಿಂದ ಮಾನಸಿಕ ಸ್ಥೈರ್ಯ: ಜಿತಕಾಮಾನಂದ ಜೀ

08:44 AM Jan 03, 2019 | |

ಪುತ್ತೂರು : ಪಠ್ಯ ಶಿಕ್ಷಣದ ಜತೆಗೆ ಆಧ್ಯಾತ್ಮ ಶಿಕ್ಷಣವನ್ನು ನೀಡಿದರೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಧೈರ್ಯವಂತರನ್ನಾಗಿಸಬಹುದು ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಜೀ ಹೇಳಿದರು. ಬಪ್ಪಳಿಗೆಯಲ್ಲಿ ಪುತ್ತೂರು ನಟ್ಟೋಜ ಫೌಂಡೇಶನ್‌ ಟ್ರಸ್ಟ್‌ ಪ್ರವರ್ತಿತ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ವಿದ್ಯಾರ್ಥಿನಿಯರ ನಿಲಯ ಮತ್ತು ಕಾಲೇಜು ಕಟ್ಟಡಕ್ಕೆ ಜ. 2ರಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

Advertisement

ವಿದ್ಯಾರ್ಥಿಗಳ ಮನಸ್ಸು, ಬುದ್ಧಿ, ಭಾವನೆ ಬೆಳೆಸುವ ಶಿಸ್ತಿನ ಶಿಕ್ಷಣದ ಅಗತ್ಯತೆ ಇಂದು ಇದೆ. ಶಿಕ್ಷಣದಲ್ಲಿ ಅಧ್ಯಾತ್ಮವನ್ನು ಬೆರೆಸಿದಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿ ದೆಸೆಯಲ್ಲಿ ಪುಸ್ತಕದ ಜತೆಗೆ ಆಂತರಿಕ ಶಕ್ತಿಯ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಸಂಸ್ಕೃತಿಯ ಶಿಕ್ಷಣದಿಂದ ಭಾರತದಲ್ಲಿ ವ್ಯಕ್ತಿತ್ವ ನಿರ್ಮಾಣದ ಕೆಲಸ ಆಗುತ್ತಿದೆ. ಈ ಕೆಲಸವನ್ನು ಅಂಬಿಕಾ ವಿದ್ಯಾಲಯ ಮಾಡುತ್ತಿದೆ. ಭಾರತೀಯ ಕುಟುಂಬ ಪದ್ಧತಿ ಇಲ್ಲಿನ ವಿದ್ಯಾರ್ಥಿಗಳ ಪ್ರತಿಭೆಗೆ ಕಾರಣ ಎಂದರು.

ಪರಂಪರೆಯ ಬುನಾದಿ
ಶಾಸಕ ಸಂಜೀವ ಮಠಂದೂರು ಮಾತನಾಡಿ, ತನ್ನದೇ ವಿಶಿಷ್ಟ ಹೆಜ್ಜೆಯಿಂದಾಗಿ ಪುತ್ತೂರಿನಲ್ಲಿ ಅಂಬಿಕಾ ವಿದ್ಯಾಲಯ ಉತ್ತಮ ಹೆಸರು ಗಳಿಸಿದೆ. ಈ ಜ್ಞಾನ ಮಂದಿರದಲ್ಲಿ ಪರಂಪರೆಯ ಬುನಾದಿಯ ಮೇಲೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಯೋಗ, ಆಧ್ಯಾತ್ಮ ಮತ್ತು ರಾಷ್ಟ್ರ ಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಜಾಗೃತಗೊಳಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದರು.

ಮಾದರಿ ಶಿಕ್ಷಣ ಸಂಸ್ಥೆ
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಅಂಬಿಕಾ ವಿದ್ಯಾಲಯವು ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಶಿಕ್ಷಣ ನೀಡುತ್ತಿದೆ. ಅಲ್ಲದೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ ಎಂದರು.

ನಟ್ಟೋಜ ಫೌಂಡೇಶನ್‌ ಟ್ರಸ್ಟ್‌ನ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್‌ ಉಪಸ್ಥಿತರಿದ್ದರು. ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿ, ಉಪ ಪ್ರಾಂಶುಪಾಲ ಸತ್ಯಜಿತ್‌ ಉಪಾಧ್ಯಾಯ ವಂದಿಸಿದರು. ಶ್ರೀಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next