Advertisement
ಕಾರ್ಯಕ್ರಮವನ್ನು ಉದ್ಘಾಟಿಸಿದ ಪೂಜ್ಯ ಬಾಲಕೃಷ್ಣ ಗರೂಜಿರವರು ಪಾರಂಪರಿಕ ವೈದ್ಯಕೀಯ ಪರಂಪರೆಯು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದ್ದು ಇತ್ತೀಚಿನ ಯುವಜನತೆ ಪಾರಂಪರಿಕ ವೈದ್ಯಕೀಯ ಪದ್ದತಿಯನ್ನು ಹೆಚ್ಚು ಅಳವಡಿಸಿಕೊಂಡು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
Related Articles
Advertisement
ತುಮಕೂರು ತಾಲ್ಲೂಕು ಪಾರಂಪರಿಕ ವೈದ್ಯ ಪರಿಷತ್, ಅಧ್ಯಕ್ಷ ಕುಂ.ಶಿ.ಸದಾಶಿವಯ್ಯ ಮಾತನಾಡಿ ಕೆಲವು ಆಯುರ್ವೇದ ಗುಣವುಳ್ಳ ಸಸ್ಯಗಳನ್ನು ಪರಿಚಯಿಸಿ ಅವುಗಳಿಂದ ಮನೆಮದ್ದು ತಯಾರಿಕೆ ಮತ್ತು ಬಳಕೆಮಾಡುವ ಬಗ್ಗೆ ತಿಳಿವಳಿಕೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಮೂಡಲಗಿರಿಯಪ್ಪನವರು ಪುರಾತನ ಇತಿಹಾಸ ಹೊಂದಿರುವ ಮಿಂಚಕಲ್ಲು ಬೆಟ್ಟದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿಯ ಪಾದುಕೆಯಿದ್ದು ಶತಮಾನಗಳಿಂದ ಪಾದುಕೆಗಳಿಗೆ ಪೂಜೆ, ಆರತಿ, ಹೋಮ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಬೇಕೆಂಬುದು ಭಕ್ತಾದಿಗಳ ಬಹು ವರ್ಷಗಳ ಕನಸಾಗಿದ್ದು ಭಕ್ತಾದಿಗಳು ದೇವಾಲಯ ನಿರ್ಮಾಣಕ್ಕೆ ತನು, ಮನ, ಧನ ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ದೇವಾಲಯ ಸಮಿತಿಯ ಕಾರ್ಯದರ್ಶಿಯವರಾದ ವಾಸುದೇವಕುಮಾರ್‌ರವರು ತುಮಕೂರು ನಗರದಿಂದ 20 ಕಿ.ಮೀ ದೂರವಿರುವ ಮಿಂಚಕಲ್ಲು ಬೆಟ್ಟವು ಸುಮಾರು 400 ವರ್ಷಗಳ ಇತಿಹಾಸ ಪರಂಪರೆಯನ್ನು ಹೊಂದಿದ್ದು ಈ ಬೆಟ್ಟವು 3612.8 ಅಡಿಗಳ ಎತ್ತರದ ಬೆಟ್ಟವಾಗಿದ್ದು, ಐದು ಸುತ್ತಿನ ಕೋಟೆ, ಕೋಟೆ ಬಾಗಿಲುಗಳು, 8 ರಿಂದ 10 ನೀರಿನ ದೊಣೆಗಳು, ಮಂಟಪಗಳು ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಶ್ರೀ ವೆಂಕಟರಮಣ ಸ್ವಾಮಿಯ ಪಾದಗಳು ಇದ್ದು ಇವುಗಳು ಅಳಿವಿನ ಅಂಚಿನಲ್ಲಿದ್ದು ಸರ್ಕಾರ ಇವುಗಳನ್ನು ಉಳಿಸಿ ಅಭಿವೃದ್ದಿಪಡಿಸಿ ದಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರವಾಗಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾದ ನಗರಾಭಿವೃದಿ ಪ್ರಾಧಿಕಾರದ ಆಯುಕ್ತರಾದ ಗೋಪಾಲ್ ಜಾದವ್, ಕಂದಾಯ ಅಧಿಕಾರಿಯಾದ ದೇವರಾಜು, ಬೆಳಧರ ಗ್ರಾಮ ಪಂಚಾಯಿತಿ ಸದಸ್ಯರಾದ ಪುಟ್ಟರಾಜು, ಯಶೋದಮ್ಮ, ಮಹೇಶ್, ಶೋಭ, ಪಾರಂಪರಿಕ ವೈದ್ಯ ಪರಿಷತ್ ಸಂಚಾಲಕರಾದ ಸರೇಶ್ ಕುಮಾರ್, ಮಿಂಚಕಲ್ಲು ಬೆಟ್ಟ ಶ್ರೀ ವೆಂಕಟರಮಣ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ ಗೌರವ ಅಧ್ಯಕ್ಷರಾದ ತಿಮ್ಮೇಗೌಡ್ರು, ನಿರ್ದೇಶಕರಾದ ರಾಮಚಂದ್ರಪ್ಪ, ಜಯರಾಮಯ್ಯ, ಪಿ ಸಿದ್ದಗಂಗಪ್ಪ, ಮಾರುತಿ, ಡಿ.ನರಸರಾಜು, ಸಿ.ಡಿ.ನರಸರಾಜು, ಹನುಮಂತರಾಜು, ಬಸವರಾಜು, ಸಿ ಆರ್ ರಂಗನಾಥ್ ಸ್ವಾಮಿ, ಸರೇಶ್, ತಿಮ್ಮರಾಜು, ಒಬಳಾಪುರ ಗ್ರಾಪಂ ಸದಸ್ಯ ಆನಂದ್ ಇದ್ದರು.
ಚಿತ್ರ:ಮಿಂಚುಕಲ್ಲು ಬೆಟ್ಟ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ವನ್ನು ಪೂಜ್ಯರಾದ ಬಾಲಕೃಷ್ಣ ಗುರೂಜಿ ಉದ್ಘಾಟನೆ ಮಾಡಿದರು.