Advertisement

Udupi; ಎಫ್‌ಎಂ ರೇಡಿಯೋ ಪ್ರಸಾರ ಕೇಂದ್ರಕ್ಕೆ ಶಿಲಾನ್ಯಾಸ

12:22 AM Jan 20, 2024 | Team Udayavani |

ಉಡುಪಿ: ಉಡುಪಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಕಾಶವಾಣಿ ಎಫ್‌ಎಂ ರೇಡಿಯೋ ಪ್ರಸಾರ ಕೇಂದ್ರ (ಟ್ರಾನ್ಸ್‌ ಮೀಟರ್‌)ಕ್ಕೆ ಪ್ರಧಾನಿ ನರೇಂದ್ರ ಮೋದಿ ಚೆನ್ನೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುವಲ್‌ ವೇದಿಕೆಯ ಮೂಲಕ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಅಜ್ಜರಕಾಡು ನಾಯರ್‌ಕೆರೆ ಸಮೀಪ ಈ ಹಿಂದೆ ದೂರದರ್ಶನ ರಿಲೇ ಪ್ರಸಾರ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಪ್ರಸ್ತುತ ಕಾರ್ಯಚಟುವಟಿಕೆ ನಿಲುಗಡೆಗೊಂಡಿರುವ ಕಟ್ಟಡದಲ್ಲಿ ಪ್ರಧಾನಿ ಮೋದಿ ಚಾಲನೆ ಕೊಟ್ಟಿರುವ ಆಕಾಶವಾಣಿ ಎಫ್‌ಎಂ ರೇಡಿಯೋ ಪ್ರಸಾರ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಆಕಾಶವಾಣಿ ಮತ್ತು ದೂರದರ್ಶನ ತಾಂತ್ರಿಕ ನೌಕರರ ಸಂಘದ ರಾಷ್ಟ್ರೀಯ ವಕ್ತಾರ ಚಂದ್ರಶೇಖರ್‌ ಶೆಟ್ಟಿ ತಿಳಿಸಿದ್ದಾರೆ.

ಶಿಕ್ಷಣ, ಮಾಹಿತಿ, ಮನೋರಂಜನೆ ಹಾಗೂ ಕೇಂದ್ರ ಸರಕಾರದ ಎಲ್ಲ ಜನಪರ ಯೋಜನೆಗಳು ಮತ್ತು ಮಾಹಿತಿಯನ್ನು ಮನೆಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ರೇಡಿಯೋ ಕೇಂದ್ರಗಳ ವಿಸ್ತರಣೆಯು ಕೇಂದ್ರ ಸರಕಾರದ ಬಿಐಎನ್‌ಡಿ ಯೋಜನೆಯಡಿ ನಡೆಯುತ್ತಿದೆ. ಅದರಂತೆ ದೇಶದ ನಾನಾ ಕಡೆಗಳಲ್ಲಿ ಸುಮಾರು 600ಕ್ಕೂ ಅಧಿಕ ಎಫ್‌ಎಂ ಟ್ರಾನ್ಸ್‌ಮೀಟರ್‌ (ಪ್ರಸಾರ ಕೇಂದ್ರಗಳು) ಹಂತಹಂತವಾಗಿ ಬರುತ್ತಿದ್ದು, ಇದರಿಂದ ಸಮಾಜದ ಪ್ರತಿಯೊಬ್ಬರಿಗೂ ಸರಕಾರ ಸವಲತ್ತುಗಳ ಮಾಹಿತಿ ಸಿಗುತ್ತದೆಎಂದರು.

ಮಂಗಳೂರು ಆಕಾಶವಾಣಿಯ ಮುಖ್ಯಸ್ಥ ಉನ್ನಿಕೃಷ್ಣನ್‌, ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮೋಹಿನಿ ಬೈಲೂರು, ಬ್ರಹ್ಮಾವರ ಆಕಾಶವಾಣಿ ಮುಖ್ಯಸ್ಥ ಅಜಿತ್‌ ಕುಮಾರ್‌ ಬೈಕಾಡಿ, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಹಿರಿಯ ಸಿಬಂದಿ ಉಪಸ್ಥಿತರಿದ್ದರು.

ಉಡುಪಿಯಲ್ಲಿ ಈ ಹಿಂದೆ ದೂರ
ದರ್ಶನ ಮರುಪ್ರಸಾರ ಕೇಂದ್ರ ಕಾರ್ಯಾಚರಿಸುತ್ತಿತ್ತು. ಆ್ಯಂಟೆನಾ ಮೂಲಕ ಬೆಂಗಳೂರು ಹಾಗೂ ಹೊಸದಿಲ್ಲಿ ದೂರದರ್ಶನ ಕಾರ್ಯಕ್ರಮಗಳನ್ನು ಇಲ್ಲಿ ಮರುಪ್ರಸಾರ ಮಾಡಲಾಗುತ್ತಿತ್ತು. ಕ್ರಮೇಣ ಆ್ಯಂಟೆನಾ ಮೂಲಕ ಮರುಪ್ರಸಾರ ಸ್ಥಗಿತಗೊಂಡ ಬಳಿಕ ಈ ಕೇಂದ್ರ ಕೂಡ ಪಾಳುಬಿದ್ದಿತ್ತು. ಆದರೆ ದೂರದರ್ಶನ ಮರುಪ್ರಸಾರ ಕೇಂದ್ರದ ಆ್ಯಂಟೆನಾ ಈಗಲೂ ಹೇಗೆಯೇ ಇದೆ. ಹೀಗಾಗಿ ಅದೇ ಕೇಂದ್ರವನ್ನು ನವೀಕರಿಸಲು ಉದ್ದೇಶಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next