ಬೆಳ್ತಂಗಡಿ: ಜನವರಿಯಿಂದ ನಾಪತ್ತೆಯಾಗಿದ್ದ ಬೆಳ್ತಂಗಡಿ ಪ.ಪಂ. ಪೌರ ಕಾರ್ಮಿಕನ ಶವ ಬೆಳ್ತಂಗಡಿ ಸರಕಾರಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.
ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರದ ನಿವಾಸಿಯಾಗದ್ದು, ಬೆಳ್ತಂಗಡಿಯಲ್ಲಿ ವಾಸವಿದ್ದ ಪೌರಕಾರ್ಮಿಕ ಲಿಂಗ ಶೆಟ್ಟಿ (43) ಮೃತಪಟ್ಟವರು.
ಇಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸ ವಾಗಿದ್ದರು. ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕೆಲವು ತಿಂಗಳ ಹಿಂದೆ ಯುವತಿಯೊಬ್ಬಳ ಜತೆ ಪ್ರೀತಿಯಾಗಿದ್ದು, ಈ ವಿಚಾರ ಮನೆಯವರಿಗೆ ಗೊತ್ತಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಮನೆಗೆ ವಾಪಸಾಗಿದ್ದರು. ಬಳಿಕ ಲಿಂಗ ಶೆಟ್ಟಿ ನಾಪತ್ತೆಯಾಗಿದ್ದರು.
ಇದನ್ನೂ ಓದಿ:ಶಿಬರೂರು ಸೇತುವೆ ಬಳಿ ಹುಲಿ: ಸುಳ್ಳು ವೀಡಿಯೋ ವೈರಲ್
ಈ ಬಗ್ಗೆ ನಗರ ಪಂಚಾಯತ್ ಹಾಗೂ ಮನೆಮಂದಿ ಯಾವುದೇ ದೂರು ನೀಡಿರಲಿಲ್ಲ. ಶವ ಪತ್ತೆಯಾದ ಜಾಗದಲ್ಲಿ ಬಟ್ಟೆ, ಹಣ, ಐಡಿ, ಚಪ್ಪಲಿ ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.