Advertisement

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿಗೆ ಮೂರನೇ ವಿವಾಹ!

04:01 PM Dec 23, 2022 | Team Udayavani |

ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಶುಕ್ರವಾರ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದಾರೆ. ಬ್ರಿಟಿಷ್-ಪಾಕಿಸ್ಥಾನಿ ಪತ್ರಕರ್ತೆ ಮಿರ್ಜಾ ಬಿಲಾಲ್ ಅವರೊಂದಿಗಿನ ವಿವಾಹದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಮೂರನೇ ಮದುವೆಯನ್ನು ಘೋಷಿದ್ದಾರೆ.

Advertisement

ತನ್ನ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡ ರೆಹಮ್ ಖಾನ್ ಹೊಸ ಬಾಳ ಸಂಗಾತಿ ಮಿರ್ಜಾ ಬಿಲಾಲ್ ಜತೆಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದು ಪೋಸ್ಟ್‌ನಲ್ಲಿ”ಅಂತಿಮವಾಗಿ ನಾನು ನಂಬಬಹುದಾದ ವ್ಯಕ್ತಿಯನ್ನು ಕಂಡುಕೊಂಡಿದ್ದೇನೆ” ಎಂದು ಬರೆದಿದ್ದಾರೆ.

ರೆಹಮ್ ಖಾನ್ ಮತ್ತು ಮಿರ್ಜಾ ಬಿಲಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಪ್ರಕಾರ ಯುಎಸ್‌ನ ಸಿಯಾಟಲ್‌ನಲ್ಲಿ ಸರಳವಾಗಿ ನಿಕಾ ಮಾಡಿಕೊಂಡಿದ್ದಾರೆ.

ರೆಹಾಮ್ 2015 ರಲ್ಲಿ ಇಮ್ರಾನ್ ಖಾನ್ ಅವರೊಂದಿಗೆ ದೂರವಾಗಿದ್ದರು. ಮಾಜಿ ಪ್ರಧಾನಿ ಅವರ ಎರಡನೇ ಪತಿಯಾಗಿದ್ದರು. 1993 ರಲ್ಲಿ ಅವರು ತಮ್ಮ ಮೊದಲ ಸೋದರಸಂಬಂಧಿ ಇಜಾಜ್ ರೆಹಮಾನ್ ಎಂಬ ಬ್ರಿಟಿಷ್ ಮನೋವೈದ್ಯರನ್ನು ವಿವಾಹವಾಗಿದ್ಧರು. ಆದಾಗ್ಯೂ, ಆ ಮದುವೆಯು 2005 ರಲ್ಲಿ ಕೊನೆಗೊಂಡಿತು.2014 ರಲ್ಲಿ ಇಮ್ರಾನ್ ಖಾನ್ ಅವರನ್ನು ವಿವಾಹವಾದರಾದರೂ ಮದುವೆಯು ಕೇವಲ 10 ತಿಂಗಳಲ್ಲೇ ಮುರಿದು ಬಿದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next