Advertisement

ಗೊಬ್ಬರವಾಗಿ ಬದಲಾಗಲಿದೆ ಗಂಗೆಯ ಕೆಸರು;ಗಂಗಾ ನೈರ್ಮಲ್ಯ ನಿಟ್ಟಿನಲ್ಲಿ ಸರ್ಕಾರ ಚಿಂತನೆ

08:57 PM Mar 20, 2022 | Team Udayavani |

ನವದೆಹಲಿ: ಗಂಗಾ ನದಿಯಲ್ಲಿನ ಕೆಸರನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಅವುಗಳನ್ನು ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ಬಳಸುವಂತೆ ಮಾಡಲು ಮತ್ತು ಆ ಮೂಲಕ ಸಾವಯವ ಕೃಷಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ, ರಾಸಾಯನಿಕಗಳು ನದಿಯನ್ನು ಸೇರದಂತೆ ತಡೆಯುವ ನಿಟ್ಟಿನಲ್ಲೂ ಸರ್ಕಾರ ಯೋಜನೆ ರೂಪಿಸುತ್ತಿದೆ.

Advertisement

ಗಂಗಾ ನದಿಯ ಕೆಸರಿನ ನಿರ್ವಹಣೆ ಕುರಿತು ಕಳೆದ 2 ವಾರಗಳಿಂದ ಸತತ ಹಲವು ಸುತ್ತುಗಳ ಸಭೆ ನಡೆದಿದ್ದು, ಬೇರೆ ಬೇರೆ ರೀತಿಯ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ರಾಷ್ಟ್ರೀಯ ಸ್ವತ್ಛ ಗಂಗಾ ಯೋಜನೆ(ಎನ್‌ಎಂಸಿಜಿ) ಪ್ರಧಾನ ನಿರ್ದೇಶಕ ಅಶೋಕ್‌ ಕುಮಾರ್‌ ಹೇಳಿದ್ದಾರೆ.

ಅದರಂತೆ, ನದಿಯಲ್ಲಿನ ಕೆಸರನ್ನು ಸಂಸ್ಕರಿಸಿ, ಅದನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಂಸ್ಕರಿತ ಕೆಸರು ರಸಗೊಬ್ಬರಕ್ಕೆ ಸಮಾನವಾಗಿರುತ್ತದೆ. ವಿಫ‌ುಲ ಫಾಸ್ಫರಸ್‌ ಮತ್ತು ಪೌಷ್ಟಿಕಾಂಶಗಳಿರುವ ಸಂಸ್ಕರಿತ ನೀರು ಬೆಳೆಗಳ ಬೆಳವಣಿಗೆಗೂ ಸಹಕಾರಿ. ಹೀಗಾಗಿ, ರಸಗೊಬ್ಬರವಾಗಿ ಬಳಕೆಯಾಗುವಂಥ ಸಂಸ್ಕರಿತ ಕೆಸರನ್ನು ಉತ್ಪತ್ತಿ ಮಾಡಿ, ಅದನ್ನು ರೈತರಿಗೆ ಕಡಿಮೆ ದರದಲ್ಲಿ ನೀಡುವ ಕುರಿತು ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಇದಕ್ಕೆ ಅವರು ಒಪ್ಪಿದರೆ, ನದಿಗಳಿಗೆ ಅಪಾಯಕಾರಿ ರಾಸಾಯನಿಕಗಳು ಸೇರುವುದನ್ನೂ ತಪ್ಪಿಸಿದಂತಾಗುತ್ತದೆ.

ಏನು ಅನುಕೂಲ?
– ಗಂಗಾ ನದಿಯೂ ಕೆಸರಿನಿಂದ ಮುಕ್ತಗೊಂಡು, ಸ್ವಚ್ಛಗೊಳ್ಳುತ್ತದೆ
– ರಾಸಾಯನಿಕಗಳ ಬದಲು ರೈತರು ಸಾವಯವ ಗೊಬ್ಬರ ಬಳಸುತ್ತಾರೆ
– ಸಾವಯವ ಕೃಷಿಗೆ ಉತ್ತೇಜನ ಸಿಗಲಿದೆ
– ಅಪಾಯಕಾರಿ ರಾಸಾಯನಿಕಗಳು ನದಿಗೆ ಸೇರುವುದು ತಪ್ಪುತ್ತದೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next