Advertisement

ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಕ್ಕೆ ಕಾಯ್ದೆ ರೂಪಿಸಿ

06:10 PM Jan 11, 2022 | Team Udayavani |

ಕಾರಟಗಿ: ಆರು ವರ್ಷದೊಳಗಿನ ಮಗುವಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು. ಐಸಿಡಿಎಸ್‌ ಯೋಜನೆಯನ್ನು ಬಲಪಡಿಸಬೇಕು ಮತ್ತು ಅಂಗನವಾಡಿ ಕೇಂದ್ರಗಳನ್ನು ಗ್ರಾಪಂಗಳಿಗೆ ಕೊಡುವುದನ್ನು ವಿರೋಧಿಸಿ ಪಟ್ಟಣದಲ್ಲಿ ಅಂಗನವಾಡಿ ನೌಕರರ ತಾಲೂಕು ಸಂಘದಿಂದ ಪ್ರತಿಭಟನೆ ನಡೆಯಿತು.

Advertisement

ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಬಳಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರದ ವಿರುದ್ಧಘೋಷಣೆಕೂಗಿ ಗ್ರೇಡ್‌-2 ತಹಶೀಲ್ದಾರ್‌ವಿಶ್ವನಾಥ್‌ ಮುರಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಂತರ ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಅಮರಮ್ಮ ಯರಡೋಣಾ ಮಾತನಾಡಿ, ಅಂಗನವಾಡಿ ಕೇಂದ್ರಗಳನ್ನು ಗ್ರಾಪಂ ಸುಪರ್ದಿಗೆ ವಹಿಸುವುದನ್ನು ಕೈಬಿಡಬೇಕು. ಎಲ್‌ಕೆಜಿ ಮತ್ತು ಯುಕೆಜಿಯನ್ನು ಪಬ್ಲಿಕ್‌ ಸ್ಕೂಲ್‌ನಲ್ಲಿ ಆರಂಭಿಸುವುದನ್ನು ಕೈ ಬಿಟ್ಟು ಐಸಿಡಿಎಸ್‌ ಯೋಜನೆ ಬಲಪಡಿಸಿ ಅಂಗನವಾಡಿ ಕೇಂದ್ರಗಳಿಗೆ ಶಕ್ತಿ ತುಂಬಬೇಕು. ಇದೇ ಐಸಿಡಿಎಸ್‌ನ5 ಉದ್ದೇಶಗಳಿಗೆ-ಉಳಿದ ಹೆಚ್ಚುವರಿ ಕೆಲಸ ನಿರ್ಬಂಧಿಸಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು
ನೀಡಬೇಕು. ಇನ್ನು ಕೊರೊನಾ ಸಂದರ್ಭದಲ್ಲಿ ನಿಧನರಾದ ಕುಟುಂಬದವರಿಗೆ 30 ಲಕ್ಷ ಪರಿಹಾರ ಒದಗಿಸಬೇಕು.

ಕಾರ್ಯಕರ್ತೆಯರಿಗೆ ಕೆಲಸದ ಹೊರೆಯಂತೆ ಗೌರವ ಧನ ಹೆಚ್ಚಿಸಬೇಕು. ಕಾರ್ಯಕರ್ತೆ ಹಾಗೂ ಸಹಾಯಕಿಯರ ವೇನತ ವ್ಯತ್ಯಾಸ ಸರಿಪಡಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕು ಕಾರ್ಯದರ್ಶಿ ಲಕ್ಷ್ಮೀದೇವಿ ಸಜ್ಜನ್‌, ಖಜಾಂಚಿ ಅನುಸೂಯಾ ಸಿದ್ದಾಪುರ, ಸುಮಂಗಲಾ ಎಂ., ಅಂಬಮ್ಮ, ಉಮಾದೇವಿ, ರಾಧಾ, ಮಹಾಲಕ್ಷ್ಮೀ, ಜಾಕೀಯಾ, ಸಿದ್ಧಲಿಂಗಮ್ಮ, ರತ್ನಮ್ಮ, ಭಾಗ್ಯಲಕ್ಷ್ಮೀ, ಗಂಗಮ್ಮ, ಶರಣಮ್ಮ, ಸುನೀತಾ, ಗಿರಿಜಾ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next