Advertisement

ಟಿ20 ವಿಶ್ವಕಪ್‌ ಗೆಲ್ಲಿಸಿದ ಸಿಮನ್ಸ್‌ ಆಫ್ಘಾನಿಸ್ತಾನ ಕೋಚ್‌

06:45 AM Jan 02, 2018 | Team Udayavani |

ಕಾಬೂಲ್‌: ವೆಸ್ಟ್‌ ಇಂಡೀಸಿನ ಮಾಜಿ ಕ್ರಿಕೆಟಿಗ ಫಿಲ್‌ ಸಿಮನ್ಸ್‌ ಆಫ್ಘಾನಿಸ್ತಾನ ಕ್ರಿಕೆಟ್‌ ತಂಡದ ನೂತನ
ಪ್ರಧಾನ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

Advertisement

ಭಾರತದ ಲಾಲ್‌ಚಂದ್‌ ರಜಪೂತ್‌ ಅವರಿಂದ ತೆರವಾದ ಸ್ಥಾನವನ್ನು ಸಿಮನ್ಸ್‌ ತುಂಬಲಿದ್ದಾರೆ. ಅವರು ತರಬೇತು ದಾರರಾಗಿದ್ದಾಗ ವೆಸ್ಟ್‌ ಇಂಡೀಸ್‌ ತಂಡವನ್ನು ಎರಡು ಬಾರಿ ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟದ ಮೇಲೆ ಕೂರಿಸಿದ್ದಾರೆ. ಫಿಲ್‌ ಸಿಮನ್ಸ್‌ ಜ.8ರಂದು ತಮ್ಮ ಕರ್ತವ್ಯವನ್ನು ಆರಂಬಿಸಲಿದ್ದು, ದುಬೈಯಲ್ಲಿರುವ ಆಫ್ಘಾನಿಸ್ತಾನ
ತಂಡವನ್ನು ಕೂಡಿಕೊಳ್ಳಲಿದ್ದಾರೆ. ಜಿಂಬಾಬ್ವೆ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಾಗಿ ಆಫ‌^ನ್‌
ತಂಡ ದುಬೈಯಲ್ಲಿ ಅಭ್ಯಾಸ ನಡೆಸಲಿದೆ. 2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಮುಗಿಯುವ ತನಕ
ಸಿಮನ್ಸ್‌ ಒಡಂಬಡಿಕೆ ಜಾರಿಯಲ್ಲಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next