ಲಂಡನ್: ತೆರಿಗೆ ಕಡಿತದ ಕಾರಣ ಭಾರೀ ಆರ್ಥಿಕ ಬಿಕ್ಕಟ್ಟಿನ ನಡುವೆ ಕೇವಲ 44 ದಿನಗಳ ಅಧಿಕಾರದಲ್ಲಿದ್ದ ಬ್ರಿಟಿಷ್ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರ ವೈಯಕ್ತಿಕ ಫೋನನ್ನು ಹ್ಯಾಕ್ ಮಾಡಲಾಗಿತ್ತು ಎಂದು ವರದಿಯಾಗಿದೆ.
ಟ್ರಸ್ ಅವರು ಯುಕೆ ವಿದೇಶಾಂಗ ಸಚಿವರಾಗಿದ್ದಾಗ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗಾಗಿ ಕೆಲಸ ಮಾಡುತ್ತಿದ್ದ ಶಂಕಿತ ಏಜೆಂಟ್ ಗಳು ಹ್ಯಾಕ್ ಮಾಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ನಂತರ ಹಣಕಾಸು ಮಂತ್ರಿಯಾದ ಟ್ರಸ್‌ನ ಆಪ್ತ ಸ್ನೇಹಿತ ಕ್ವಾಸಿ ಕ್ವಾರ್ಟೆಂಗ್‌ನೊಂದಿಗೆ ವಿನಿಮಯ ಮಾಡಿಕೊಂಡ ಖಾಸಗಿ ಸಂದೇಶಗಳ ಜೊತೆಗೆ ಅಂತಾರಾಷ್ಟ್ರೀಯ ಮಿತ್ರರಾಷ್ಟ್ರಗಳೊಂದಿಗಿನ ಮಾತುಕತೆಗಳ ರಹಸ್ಯ ವಿವರಗಳನ್ನು ರಷ್ಯಾದ ಏಜೆಂಟರು ಟ್ರಸ್ ಮೊಬೈಲ್ ನಿಂದ ಪಡೆದಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಅಭಿಮಾನಿ ದೇವರುಗಳಿಂದ ಅಪ್ಪು ಸ್ಮರಣೆ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ಕಂಠೀರವ ಸ್ಟುಡಿಯೋ
Related Articles
ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಪ್ರಚಾರದ ಸಮಯದಲ್ಲಿ ಲಿಜ್ ಟ್ರಸ್ ಫೋನ್ ಹ್ಯಾಕ್ ಪತ್ತೆಯಾಯಿತು.
ಈ ಮೆಸೇಜ್ ಗಳು ಉಕ್ರೇನ್ – ರಷ್ಯಾ ಯುದ್ಧದ ಬಗ್ಗೆ ಚರ್ಚೆಗಳನ್ನು ಒಳಗೊಂಡಿವೆ ಎಂದು ನಂಬಲಾಗಿದೆ, ಇದರಲ್ಲಿ ಶಸ್ತ್ರಾಸ್ತ್ರ ಸಾಗಣೆಯ ವಿವರಗಳು ಸೇರಿವೆ ಎಂದು ವರದಿ ಹೇಳಿದೆ.
ಇದಲ್ಲದೆ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಿರುದ್ಧ ಲಿಜ್ ಟ್ರಸ್ ಮತ್ತು ಕ್ವಾರ್ಟೆಂಗ್ ಮಾಡಿರುವ ಟೀಕೆಗಳ ಮೆಸೇಜ್ ಗಳು ಹ್ಯಾಕರ್ ಗಳ ಪಾಲಾಗಿದೆ ಎಂದು ವರದಿ ಹೇಳಿದೆ.