Advertisement

ಮಾಜಿ ಟೆಸ್ಟ್‌ ಕ್ರಿಕೆಟಿಗ ರಾಜಿಂದರ್‌ ಪಾಲ್‌ ನಿಧನ

07:30 AM May 11, 2018 | Team Udayavani |

ಡೆಹ್ರಾಡೂನ್‌: 1964ರಷ್ಟು ಹಿಂದೆ ಭಾರತದ ಪರ ಏಕೈಕ ಟೆಸ್ಟ್‌ ಪಂದ್ಯವನ್ನಾಡಿದ ರಾಜಿಂದರ್‌ ಪಾಲ್‌ (80) ಡೆಹ್ರಾಡೂನ್‌ನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಈ ವಿಷಯವನ್ನು ಅವರ ಸಹೋದರ ರವಿಂದರ್‌ ಪಾಲ್‌ ಮಾಧ್ಯಮಗಳಿಗೆ ತಿಳಿಸಿದರು.

Advertisement

ಬಲಗೈ ಮಧ್ಯಮ ವೇಗಿಯಾಗಿದ್ದ ರಾಜಿಂದರ್‌ ಪಾಲ್‌ 1964ರಲ್ಲಿ ಎಂ.ಜೆ.ಕೆ. ಸ್ಮಿತ್‌ ನೇತೃತ್ವದ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಮುಂಬಯಿಯ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ಟೆಸ್ಟ್‌ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಆಗ ಮನ್ಸೂರ್‌ ಅಲಿ ಖಾನ್‌ ಪಟೌಡಿ ಭಾರತ ತಂಡದ ನಾಯಕರಾಗಿದ್ದರು. ಆದರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ರಾಜಿಂದರ್‌ ಪಾಲ್‌ಗೆ ವಿಕೆಟ್‌ ಲಭಿಸಿರಲಿಲ್ಲ. ಇದೇ ಅವರ ಅಂತಿಮ ಟೆಸ್ಟ್‌ ಪಂದ್ಯವೂ ಆಯಿತು.

ದಿಲ್ಲಿಯಲ್ಲಿ ಜನಿಸಿದ ರಾಜಿಂದರ್‌ ಪಾಲ್‌ ಹರಿಯಾಣ, ಪಂಜಾಬ್‌, ಸದರ್ನ್ ಪಂಜಾಬ್‌ ಹಾಗೂ ದಿಲ್ಲಿ ತಂಡಗಳನ್ನು ದೇಶಿ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. 98 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಿಂದ 337 ವಿಕೆಟ್‌ ಉರುಳಿಸಿದ ಸಾಧನೆ ಪಾಲ್‌ ಅವರದ್ದಾಗಿದೆ.

80ರ ಹರೆಯದ ರಾಜಿಂದರ್‌ ಪಾಲ್‌ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ ಎಂದು ಸಹೋದರ ರವಿಂದರ್‌ ಪಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next