Advertisement

ತಾಪಂ ಕಚೇರಿ ಎದುರು ಮಾಜಿ ಸೈನಿಕನ ಪ್ರತಿಭಟನೆ

06:04 PM Dec 06, 2019 | Suhan S |

ಚಿಂತಾಮಣಿ: ತಮ್ಮ ಮಾಲೀಕತ್ವದ ಖಾಲಿ ನಿವೇಶನ ಅಳೆಯಲು ಕಳೆದ ಎರಡು ವರ್ಷ ಗಳಿಂದ ಮನವಿ ನೀಡಿ, ಕಚೇರಿಗೆ ಅಲೆದಾಡಿದರೂ ಸ್ಪಂದಿಸದ ಕಾಗತಿ ಗ್ರಾಪಂ ಅಧಿಕಾರಿಗಳ ವಿರುದ್ಧ ಬೇಸತ್ತಿರುವ ಮಾಜಿ ಸೈನಿಕನೊಬ್ಬ ತಾಲೂಕು ಪಂಚಾಯಿತಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಕಾಗತಿ ಗ್ರಾಪಂ ವ್ಯಾಪ್ತಿಯ ಹಿರಣ್ಯಪಲ್ಲಿ ಗ್ರಾಮದ ಮಂಜುನಾಥ್‌ ಎಚ್‌.ಎಂ. ಎಂಬ ಮಾಜಿ ಸೈನಿಕನೇ ಪ್ರತಿಭಟನೆಕಾರ. ತಮ್ಮ ಸ್ವಗ್ರಾಮ ಹಿರಣ್ಯಪಲ್ಲಿಯಲ್ಲಿ ತಮ್ಮ ಅಧೀನದಲ್ಲಿರುವ ಗ್ರಾಪಂ ಖಾತೆ ನಂ. 125/1 ರಲ್ಲಿನ ಖಾಲಿ ನಿವೇಶನ ಅಳೆದುಕೊಡಲು ಸುಮಾರು ಎರಡು ವರ್ಷಗಳಿಂದ ಮಾಜಿ ಸೈನಿಕ ಮಂಜುನಾಥ್‌, ಕಾಗತಿ ಗ್ರಾಪಂ ಕಚೇರಿಗೆ ಅಲೆದಾಡಿ ಹಲವು ಬಾರಿ ಪಂಚಾಯಿತಿ ಅಧಿಕಾರಿ ಶ್ರೀನಿವಾಸ್‌ಗೆ ದೂರು ನೀಡಿ ದರೂ ಪ್ರಯೋಜನವಾಗಿಲ್ಲ. ಕಾರಣ ಪಂಚಾಯಿತಿ ಅಧಿಕಾರಿಗಳ ಕಾರ್ಯ ವೈಖರಿಗೆ ಬೇಸತ್ತಿದ್ದೇನೆ. ಚಿಂತಾಮಣಿ ನಗರದ ತಾಪಂ ಕಚೇರಿ ಬಳಿ ಪ್ರತಿಭಟನೆ ಮಾಡಿ, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿಕಾರಿದರು.

ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿ, ಶ್ರೀನಗರದಲ್ಲಿ ಎದುರಾಳಿಗಳ ಕೈಗೆ ಗುಂಡೇಟು ತಗುಲಿ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ಮಾಜಿ ಸೈನಿಕ ತನ್ನ ಖಾಲಿ ನಿವೇಶನಕ್ಕೆ ಹೋಗಿ ಬರಲು ದಾರಿಯಿಲ್ಲದೇ ಪರದಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿರುವ ಖಾಲಿ ನಿವೇಶನವನ್ನು ಪಿಡಿಒ ಬೇರೆಯವರ ಹೆಸರಿಗೆ ಇಸ್ವತ್ತು ಮಾಡಿದ್ದಾರೆ. ಜತೆಗೆ ಖಾತೆಯನ್ನು ರದ್ದುಗೊಳಿಸಿದ್ದಾರೆ. ಇದು ಅಕ್ರಮವಾಗಿದ್ದು, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನಿನ ರೀತಿ ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಎರಡು ತಿಂಗಳು ಹಿಂದೆಯೇ ಮನವಿ ಸಲ್ಲಿಸಿದ್ದೇನೆ. ಆದರೂ ಈವರೆಗೂ ತಾಪಂ ಇಒ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ನನಗೆ ನ್ಯಾಯ ಸಿಗುವವರೆಗೂ ಧರಣಿ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ಬಳಿಕ ತಾಪಂ ಇಒ ಮಂಜುನಾಥ ರೆಡ್ಡಿ, ಖಾಲಿ ನಿವೇಶನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ದೇಶ ಸೇವೆ ಸಲ್ಲಿಸಿದ ಮಾಜಿ ಸೈನಿಕನಿಗೇ ನ್ಯಾಯ ಸಿಗದೇ ಹೊದರೆ, ಸಾಮಾನ್ಯ ಜನರಿಗೆ ನ್ಯಾಯ ಸಿಗಲು ಸಾದ್ಯವೇ? ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ನಿವೃತ್ತ ಸೈನಿಕನಿಗೆ ಸೂಕ್ತ ನ್ಯಾಯ ಕೊಡಿಸಲು ಮುಂದಾಗತ್ತಾರೋ ಇಲ್ಲವೋ, ಅನ್ನೊದನ್ನ ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next