Advertisement

ಪರ್ವೇಜ್ ಮುಷರಫ್ ದುಬಾೖ ಆಸ್ಪತ್ರೆಗೆ ದಾಖಲು

12:30 AM Mar 19, 2019 | |

ಇಸ್ಲಾಮಾಬಾದ್‌: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಜ| ಪರ್ವೇಜ್ ಮುಷರಫ್ (75) ಅವರನ್ನು ದುಬಾೖನ ಆಸ್ಪತ್ರೆಗೆ  ದಾಖಲಿಸಲಾಗಿದೆ. ಅವರ ದೇಹದ ನರಗಳಿಗೆ ಸಂಬಂಧಿಸಿದಂತೆ ವಿಶೇಷ ಕಾಯಿಲೆ ಬಾಧಿಸತೊಡಗಿದೆ ಎಂದು ಅವರ ಆಪ್ತ ವಲಯ ತಿಳಿಸಿದೆ. ಶನಿ ವಾರ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆಯೇ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ. ವೈದ್ಯರು ಹೇಳಿದ ಪ್ರಕಾರ ಮಾಜಿ ಅಧ್ಯಕ್ಷರಿಗೆ ಪೂರ್ಣ ಪ್ರಮಾಣದಲ್ಲಿ ವಿಶ್ರಾಂತಿ ಅಗತ್ಯವಾಗಿದೆ. 2016ರ ಮಾರ್ಚ್‌ನಿಂದ ಅವರು ದುಬಾೖನಲ್ಲಿ ವಾಸಿಸುತ್ತಿದ್ದಾರೆ. 2007ರಲ್ಲಿ ಸಂವಿಧಾನವನ್ನು ಬದಲು ಪ್ರಯತ್ನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next