Advertisement

ಪೋಪ್‌ ಪ್ರಸ್ತಾವಕ್ಕೆ ನಿವೃತ್ತ ಪೋಪ್‌ ಆಕ್ಷೇಪ

10:13 AM Jan 15, 2020 | Team Udayavani |

ವ್ಯಾಟಿಕನ್‌ ಸಿಟಿ: ಕ್ರಿಶ್ಚಿಯನ್‌ ಸಮುದಾಯದಲ್ಲಿ ಧರ್ಮ ಗುರುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಾಹಿತರನ್ನೂ ಆ ಹುದ್ದೆಗೆ ನೇಮಕ ಮಾಡುವ ಕುರಿತು ಪೋಪ್‌ ಫ್ರಾನ್ಸಿಸ್‌ ಮಂಡಿಸಿರುವ ಪ್ರಸ್ತಾವಕ್ಕೆ ನಿವೃತ್ತ ಪೋಪ್‌ 16ನೇ ಬೆನೆಡಿಕ್ಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಈ ಮೂಲಕ ಇದೇ ಮೊದಲ ಬಾರಿಗೆ ವ್ಯಾಟಿಕನ್‌ ಚರ್ಚ್‌ನ (ಕ್ಯಾಥೋಲಿಕ್‌) ಆಗುಹೋಗುಗಳಲ್ಲಿ ನಿವೃತ್ತ ಪೋಪ್‌ವೊಬ್ಬರು ಮಧ್ಯಪ್ರವೇಶ ಮಾಡಿದಂತಾಗಿದೆ. ಬ್ರಹ್ಮಚರ್ಯೆ (ಧರ್ಮ ಗುರುಗಳು ವೈವಾಹಿಕ ಜೀವನದಿಂದ ದೂರ ಇರುವ ವ್ರತ) ಎನ್ನುವುದು ತಲೆತಲಾಂತರಗಳಿಂದ ನಡೆದುಬಂದಿರುವ ಪವಿತ್ರ ಸಂಪ್ರದಾಯ.

ಧರ್ಮಗುರುಗಳು ಬ್ರಹ್ಮಚರ್ಯೆ ಪಾಲಿಸುವುದಕ್ಕೆ ಅದರದ್ದೇ ಆದ ಮಹತ್ವವಿದೆ. ಹೀಗಾಗಿ, ವಿವಾಹಿತರಿಗೆ ಈ ಹುದ್ದೆಯನ್ನು ನೀಡುವ ಪ್ರಸ್ತಾವವು ಒಪ್ಪುವಂಥದ್ದಲ್ಲ ಎಂದು 16ನೇ ಬೆನೆಡಿಕ್ಟ್ ಅಭಿಪ್ರಾಯಪಟ್ಟಿದ್ದಾರೆ. 16ನೇ ಬೆನೆಡಿಕ್ಟ್ ಅವರು ಕಾರ್ಡಿನಲ್‌ ರಾಬರ್ಟ್‌ ಸರಾ ಅವರ ಜತೆಗೂಡಿ ಬರೆದಿರುವ ಪುಸ್ತಕದಲ್ಲಿ ಈ ಅಂಶವನ್ನು ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next