Advertisement

ನ್ಯೂಜಿಲ್ಯಾಂಡಿನ ಮಾಜಿ ಆಲ್‌ರೌಂಡರ್‌ ಕ್ರಿಸ್‌ ಕೇರ್ನ್ಸ್ ಗೆ ಕರುಳಿನ ಕ್ಯಾನ್ಸರ್‌

11:03 PM Feb 05, 2022 | Team Udayavani |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡಿನ ಮಾಜಿ ಆಲ್‌ರೌಂಡರ್‌ ಕ್ರಿಸ್‌ ಕೇರ್ನ್ಸ್ ಮತ್ತೊಂದು ಆತಂಕಕಾರಿ ಅನಾರೋಗ್ಯ ಸಮಸ್ಯೆಗೆ ಸಿಲುಕಿದ್ದಾರೆ.

Advertisement

ಕೆಲವು ತಿಂಗಳ ಹಿಂದೆ ತೀವ್ರ ಹೃದಯಾಘಾತಕ್ಕೆ ಸಿಲುಕಿ ಬದುಕುಳಿದು ಬಂದಿದ್ದ ಅವರನ್ನೀಗ ಕರುಳಿನ ಕ್ಯಾನ್ಸರ್‌ ಕಾಡಲಾರಂಭಿಸಿದೆ. ಇದನ್ನು ಸ್ವತಃ ಕೇರ್ನ್ಸ್ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.

“ನಿನ್ನೆಯಷ್ಟೇ ನನಗೆ ಕರುಳಿನ ಕ್ಯಾನ್ಸರ್‌ ಇರುವ ವಿಚಾರ ತಿಳಿಯಿತು. ಇದೊಂದು ಆಘಾತಕಾರಿ ಸಂಗತಿ. ಆದರೆ ಇದಿನ್ನೂ ಮೊದಲ ಹಂತದಲ್ಲಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ: ಯು ಮುಂಬಾಗೆ ತಲೆಬಾಗಿದ ತಮಿಳ್‌ ತಲೈವಾಸ್‌

ಹೀಗಾಗಿ ನಾನು ನಿಜಕ್ಕೂ ಅದೃಷ್ಟಶಾಲಿ. ಇನ್ನೊಂದು ಸುತ್ತಿನ ಆರೋಗ್ಯದ ಹೋರಾಟಕ್ಕೆ ಸಜ್ಜಾಗಲಿದ್ದೇನೆ’ ಎಂದಿದ್ದಾರೆ ಕ್ರಿಸ್‌ ಕೇರ್ನ್ಸ್.

Advertisement
Advertisement

Udayavani is now on Telegram. Click here to join our channel and stay updated with the latest news.

Next