Advertisement

ಮಂದಿರ ಕಟ್ಟುವ ವರ್ಷದಲ್ಲೇ ಹೆಣ್ಣಿನ ಮೇಲೆ ದೌರ್ಜನ್ಯ; ರಾಮರಾಜ್ಯವೋ, ರಾವಣರಾಜ್ಯವೋ?: ಉಗ್ರಪ್ಪ

03:02 PM Mar 28, 2021 | Team Udayavani |

ಬೆಂಗಳೂರು: ಮರ್ಯಾದಾಪುರುಷ ಶ್ರೀರಾಮನ ದೇವಸ್ಥಾನ ಕಟ್ಟಲು ಅಯೋಧ್ಯೆಯಲ್ಲಿ ಶುರು ಮಾಡಿದ್ದಾರೆ. ದೇವಸ್ಥಾನ ಕಟ್ಟುವ ಮೊದಲ ವರ್ಷದಲ್ಲೇ ಒಂದು ಹೆಣ್ಣು ಮಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡಿದರೆ ರಾಮನ ರಾಜ್ಯವೋ, ರಾವಣನ ರಾಜ್ಯವೋ ಎಂದೆನಿಸುತ್ತಿದೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ‌ ಸಂಸದ ಉಗ್ರಪ್ಪ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಸಂಕೇತ್ ಏಣಗಿರಿಂದ ಜಂಟಿ ಸುದ್ದಿಗೋಷ್ಟಿ ನಡೆಸಿದರು.

ಈ ವೇಳೆ ಮಾತನಾಡಿದ ಉಗ್ರಪ್ಪ, ಇವತ್ತು ಹೋಳಿ ಜೊತೆಗೆ ಕಾಮದಹನ ಕೂಡಾ ಇದೆ. ರಾಜ್ಯದಲ್ಲಿ ಕಾಮ ಕ್ರೋಧಗಳು ತಾಂಡವಾಡುತ್ತಿದೆ, ಅದನ್ನು ದಹನ ಮಾಡುವಂತಾಗಲಿ ಎಂದರು.

ಇದನ್ನೂ ಓದಿ:ಸಿಡಿ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ. ನನಗೆ ಯಾವುದೇ ಆಸಕ್ತಿಯಿಲ್ಲ: ಈಶ್ವರಪ್ಪ

ನಿರ್ಭಯಾ ಪ್ರಕರಣ ವರದಿ ಇರಬಹುದು, ಅಥವಾ ನನ್ನ ನೇತೃತ್ವದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿ ನೀಡಿದ ಆರು ಸಾವಿರ ಪುಟದ ವರದಿಯಲ್ಲಿ ಇಂತಹ ಸಂದರ್ಭದಲ್ಲಿ ಪೊಲೀಸರು ಯಾವ ರೀತಿ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಪ್ರತಿನಿತ್ಯ ಆ ಹೆಣ್ಣುಮಗಳು ತನಗೆ ರಕ್ಷಣೆ ಇಲ್ಲ, ಕುಟುಂಬದವರಿಗೆ ರಕ್ಷಣೆ ಇಲ್ಲವೆಂದು ಹೇಳುತ್ತಿದ್ದಾಳೆ.  ರಾಜ್ಯದಲ್ಲಿ ಕಾನೂನು ಪರಿಪಾಲನೆ ಇದ್ದಿದ್ದೇ ಆದರೆ ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಾಗ ಯಾಕ್ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.

Advertisement

ಎಫ್‌ಐಆರ್ ದಾಖಲಾಗಾದೇ ಎಸ್‌ಐಟಿ ರಚನೇ ಹೇಗೆ ಮಾಡಿದರು? ಆ ವ್ಯಕ್ತಿ ಬೆಂಗಳೂರಿನಲ್ಲೇ ಇದ್ದರೂ ಬೇರೆ ವ್ಯಕ್ತಿ ಕೈಯಲ್ಲಿ ಹೇಗೆ ದೂರು ಕೊಡಿಸಿದಿರಿ? ಆ ಯುವತಿಯ ಪೋಷಕರು ಬಿಜಾಪುರ ಮೂಲದವರಾಗಿದರೂ, ಬೆಳಗಾವಿಗೆ ಕರ್ಕೊಂಡು ಹೋಗಿ ಅಲ್ಲಿ ದೂರು ಕೊಡಿಸಿದ್ದು ಯಾಕೆ? 376 ಕೇಸ್ ದಾಖಲಾಗಿದ್ದರೆ ಸಾಮಾನ್ಯ ವ್ಯಕ್ತಿಗಳನ್ನು ಸುಮ್ನೆ ಬಿಡ್ತಿದ್ರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ಡಿಕೆಶಿ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ, ಆರೋಪಿಗೆ ಎಸ್ ಐಟಿ ರಕ್ಷಣೆ: ಮಿಥುನ್ ರೈ

ಆ ಯುವತಿಗೆ ಯಾವ ಸಂಪರ್ಕ ಇರಲಿಲ್ಲ ಎಂದು ನಮ್ಮ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸೆ.376 ಅಡಿಯಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನ ಎಸ್‌ಐಟಿ ಮೊದಲು ಬಂಧಿಸಬೇಕು. ಎಸ್‌ಐಟಿ ತನಿಖೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಎನ್ನುವು ನಮ್ಮ ಪಕ್ಷದ ಆಗ್ರಹ ಎಂದು ಉಗ್ರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next