Advertisement
ಹಾಲಿ ಶಾಸಕ ಸುರೇಶ್‌ಗೌಡರ ಅಧಿಕಾರ ಅವಧಿ ಇರುವಾಗಲೇ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ತಾಲೂಕಿನದ್ಯಾಂತ ಹೇಳಿಕೊಂಡು ಬರುತ್ತಿರುವ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಜೆಡಿಎಸ್ ಟಿಕೆಟ್‌ಗಾಗಿ ಶತಪ್ರಯತ್ನ ಪಡುತ್ತಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿಗೊಂದಲಕ್ಕೆ ಕಾರಣವಾಗಿದೆ.
Related Articles
Advertisement
ನಿರೀಕ್ಷಿತ ಅಧಿಕಾರ ಸಿಗದೆ ಹತಾಶೆ: ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡುವರೆಂಬ ವಿಶ್ವಾಸ ಹೊಂದಿದ್ದ ಶಿವರಾಮೇಗೌಡರು, ನಂತರ ಅಲ್ಪಾವಧಿಗೆ ಸಂಸದರಾಗಿ ಕಾರ್ಯನಿರ್ವಹಿಸಿ ದ್ದರೂ ನಿರೀಕ್ಷಿತ ಅಧಿಕಾರ ಸಿಗದ ಕಾರಣ ಶಾಸಕರಾಗುವಕನಸ್ಸನ್ನೊತ್ತು ಕಣಕ್ಕಿಳಿಯುವ ತಯಾರಿ ನಡೆಸಿದ್ದಾರೆ. 66 ವರ್ಷ ತುಂಬಿರುವ ತಮಗೆ 2023ರ ಚುನಾವಣೆಯಲ್ಲಿ ಅವಕಾಶ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯ ಇರುವುದಿಲ್ಲ ಎಂದು ವರಿಷ್ಠರ ಬಳಿ ಟಿಕೆಟ್‌ಗೆ ಮೊರೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ವರಿಷ್ಠರ ಮನವೊಲಿಕೆಗೆ ಕಸರತ್ತು :
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಅಖಾಡ ಪ್ರವೇಶಿಸಲೇಬೇಕೆಂಬ ಹಠದೊಂದಿಗೆ ಜೆಡಿಎಸ್ ವರಿಷ್ಠರ ಗಮನ ಸೆಳೆಯುವ ಮತ್ತು ಮನವೊಲಿಸುವ ಪ್ರಯತ್ನವನ್ನು ಶಿವರಾಮೇಗೌಡರು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಕ್ಷೇತ್ರದಲ್ಲಿ ಆಗೊಮ್ಮೆ ಈಗೊಮ್ಮೆ ಪ್ರವಾಸ ಹಮ್ಮಿಕೊಂಡು ಶಾಸಕರ ಕಾರ್ಯವೈಖರಿ ಟೀಕಿಸುತ್ತಾ, ಜೆಡಿಎಸ್ ಕಾರ್ಯಕರ್ತರನ್ನು ಶಾಸಕರು ಕಡೆಗಣಿಸುತ್ತಿದ್ದಾರೆ ಎಂಬ ದೂರನ್ನು ವರಿಷ್ಠರ ಗಮನಕ್ಕೆ ತಂದು ಟಿಕೆಟ್ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ವರಿಷ್ಠರು, ನಾಗಮಂಗಲ ಕ್ಷೇತ್ರದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಶಿವರಾಮೇಗೌಡರಿಗೆ ಟಿಕೆಟ್ ಕೊಟ್ಟರೆ ತಾಲೂಕಿನಲ್ಲಿ ರಾಜಕೀಯ ವಾತಾವರಣಹೇಗಿರಬಹುದೆಂಬ ಬಗ್ಗೆ ಅಭಿಪ್ರಾಯ, ಮಾಹಿತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.
ಸ್ಪರ್ಧಿಸುವುದಕ್ಕೆ ಅತ್ಯುತ್ಸಾಹ : ದಳಪತಿಗಳಿಂದ ಟಿಕೆಟ್ ಖಚಿತವಾಗದಿದ್ದರೂ ತಮ್ಮ ಅಭಿಮಾನಿಗಳನ್ನು ಕಟ್ಟಿಕೊಂಡು ಕ್ಷೇತ್ರದಲ್ಲಿ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ಬಿರುಸುಗೊಳಿಸಿರುವ ಶಿವರಾಮೇಗೌಡರು, ವಾರದಲ್ಲಿ ಎರಡು-ಮೂರು ದಿನ ಕ್ಷೇತ್ರದಲ್ಲೇ ಉಳಿದು ಜನರ ಕಷ್ಟ-ಸುಖಗಳಿಗೆಸ್ಪಂದಿಸುವುದಾಗಿ ಪ್ರಚಾರ ಮಾಡುತ್ತಾ ಮತದಾರರ ವಿಶ್ವಾಸ ಮತ್ತುಅನುಕಂಪ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. 22 ವರ್ಷಗಳಿಂದಅಧಿಕಾರದಿಂದ ದೂರ ಉಳಿದಿರುವ ಶಿವರಾಮೇಗೌಡರಿಗೆ 2023ರಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇದೇ ಕಾರಣಕ್ಕೆಮುಂದಿನ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅತ್ಯುತ್ಸಾಹ ತೋರುತ್ತಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮಾಜಿ ಶಾಸಕ ಶಿವರಾಮೇಗೌಡರು ನೀಡಿರುವ ಹೇಳಿಕೆ ಹೊಸದೇನುಅಲ್ಲ (2023ರಚುನಾವಣೆಯಲ್ಲಿ ಸ್ಪರ್ಧಿಸುವುದುಖಚಿತ ಹಾಗೂತಾಲೂಕಿನಲ್ಲಿಭ್ರಷ್ಟಾಚಾರಆರೋಪ). ಅವರ ಆರೋಪ, ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. – ಸುರೇಶ್‌ಗೌಡ, ಶಾಸಕರು, ನಾಗಮಂಗಲ ಕ್ಷೇತ
– ಪಿ.ಜೆ.ಜಯರಾಂ