Advertisement

ಮತಬೇಟೆಗೆ ಸಾಕ್ಷ್ಯಚಿತ್ರ ನಿರ್ಮಿಸಿದ ಮಾಜಿ ಶಾಸಕ!

08:15 AM Feb 24, 2018 | |

ಚಿಕ್ಕಬಳ್ಳಾಪುರ: ಫೇಸ್‌ಬುಕ್‌, ಟ್ವೀಟರ್‌, ವಾಟ್ಸ್‌ಆಪ್‌ ಮೂಲಕ ಅಭ್ಯರ್ಥಿಗಳು ಚುನಾವಣಾ ಪ್ರಚಾರ ನಡೆಸುವುದು ಸಾಮಾನ್ಯ. ಆದರೆ, ಜಿಲ್ಲೆಯ ಮಾಜಿ ಶಾಸಕರೊಬ್ಬರು ತಮ್ಮ ರಾಜಕೀಯ ಸಾಧನೆ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಜೆ.ಕೆ. ಕೃಷ್ಣಾರೆಡ್ಡಿ ಜೆಡಿಎಸ್‌ 
ಮೊದಲ ಪಟ್ಟಿಯಲ್ಲಿ ತಮಗೆ ಟಿಕೆಟ್‌ ಖಾತ್ರಿಪಡಿಸಿಕೊಂಡು ಪ್ರಚಾರಕ್ಕೆ ಧುಮುಕಿದ್ದಾರೆ. ಇದರ ಬೆನ್ನಲ್ಲೇ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್‌ ತಮ್ಮ ಚುನಾವಣಾ ಪ್ರಚಾರಕ್ಕಾಗಿ “ಎ ಪಾಲಿಟಿಕಲ್‌ ಡಾಕುಮೆಂಟ್ರಿ ಆನ್‌ ಡಾ.ಎಂ.ಸಿ.ಸುಧಾಕರ್‌’ ಎಂಬ ಕಿರು ಸಾಕ್ಷ್ಯ ನಿರ್ಮಿಸಿ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು, ಕಿರುಚಿತ್ರದ ಟ್ರೈಲರ್‌ ಸದ್ದು ಮಾಡುತ್ತಿದೆ. 

Advertisement

ಸದ್ದು ಮಾಡುತ್ತಿದೆ ಟ್ರೈಲರ್‌: ಸುಧಾಕರ್‌ ಕುರಿತ ಸಾಕ್ಷ್ಯಚಿತ್ರದ ಟ್ರೈಲರ್‌ ಬಿಡುಗಡೆಗೂ ಮುನ್ನ ಕ್ಷೇತ್ರದ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಫೇಸ್‌ಬುಕ್‌, ವಾಟ್ಸ್‌ಆಪ್‌ ಮತ್ತಿತರ ಕಡೆಗಳಲ್ಲಿ ಸುಧಾಕರ್‌ ಅಭಿಮಾನಿಗಳು ಅದನ್ನು ಅಪ್‌ಲೋಡ್‌ ಮಾಡಿದ್ದು, ವಿಡಿಯೋ ತುಣಕುಗಳು ವೈರಲ್‌ ಆಗುತ್ತಿವೆ.

ಮತ ಓಲೈಕೆ: ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಮತ ಬೇಟೆ ಕಸರತ್ತು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಕೆಲವರು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದು, ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ತಮ್ಮ ಹಿಂದಿನ ಸಾಧನೆಯ ಸಾಕ್ಷ್ಯಚಿತ್ರದ ಮೂಲಕ ಜನರ ಮುಂದೆ ಹೊರಟಿದ್ದಾರೆ. 

ನಾಡಿದ್ದು ಸಮಾವೇಶ: ಕಳೆದ ಬಾರಿ ಅಧಿಕಾರ ವಂಚಿತರಾಗಿರುವ ಎಂ.ಸಿ.ಸುಧಾಕರ್‌ ಈ ಬಾರಿ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಗೊಂದಲವಿದೆ. ಕಾಂಗ್ರೆಸ್ಸಿನಿಂದ ಸ್ಪರ್ಧಿಸಲಿರುವ ಇಂಗಿತವನ್ನು ಈ ಹಿಂದೆ ವ್ಯಕ್ತಪಡಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸುಧಾಕರ್‌ ತಮ್ಮ ಚುನಾವಣಾ ಪ್ರಚಾರ ಸಭೆ, ಕಾರ್ಯಕ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಧ್ವಜ ಹಾಗೂ ಮುಖಂಡರ ಭಾವಚಿತ್ರಗಳನ್ನು ಬಳಸಿಕೊಳ್ಳದೇ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಭಾನುವಾರದಂದು ಚಿಂತಾಮಣಿಯಲ್ಲಿ ತಮ್ಮ ಕಾರ್ಯಕರ್ತರ ಬೃಹತ್‌ ಸ್ವಾಭಿಮಾನಿ ಸಮಾವೇಶ ಏರ್ಪಡಿಸುತ್ತಿದ್ದು, ಪಕ್ಷೇತರರಾಗಿ ನಿಲ್ಲುವ ಸೂಚನೆ ಕಾಣುತ್ತಿದೆ.

ಕೈ ನಾಯಕರ ವಿರುದ್ಧ ಕಿಡಿ
ಒಂದು ಗಂಟೆ ಇರುವ ಸಾಕ್ಷ್ಯಚಿತ್ರದಲ್ಲಿ ಮುಖ್ಯವಾಗಿ ಸುಧಾಕರ್‌ ಶಾಸಕರಾದ ಅವಧಿಯಲ್ಲಿ ಮಾಡಿದ ಸಾಧನೆ, ಎದುರಾಳಿಗಳಿಂದ ಎದುರಿಸದ ಸಂಕಷ್ಟ, ರಾಜಕೀಯ ಕಡು ವೈರಿ ಸಂಸದ ಕೆ.ಎಚ್‌.ಮುನಿಯಪ್ಪ ವಿರುದಟಛಿ ವಾಗ್ಧಾಳಿ, ಮರಳು ದಂಧೆ, ಹಾಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಕಾರ್ಯವೈಖರಿ ಇತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಜೊತೆಗೆ ಕಾಂಗ್ರೆಸ್‌ನ ಕೆಲ ನಾಯಕರ ಮೇಲೆ ಕಿಡಿಕಾರಿದ್ದಾರೆ. ಅವರ ತಂದೆ ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ರಾಜಕೀಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

Advertisement

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next