ಬೆಂಗಳೂರು: ಸದ್ಯ ವೈರಲ್ ಆಗಿರುವ ಆಡಿಯೋ ಈಗಿನದ್ದಲ್ಲ. ನಾನು ಮೊದಲು ಜೆಡಿಎಸ್ ನಲ್ಲಿದ್ದಾಗಿನ ಆಡಿಯೋ ಎಂದೆನಿಸುತ್ತಿದೆ. ನಾನು ಕಾಂಗ್ರೆಸ್ ಗೆ ಸೇರಿ ನಾಲ್ಕು ದಿನ ಆಗಿದೆ, ನಾಲ್ಕು ದಿನಗಳಿಂದ ನಾನು ಕಾಂಗ್ರೆಸ್ ನಲ್ಲಿದ್ದೇನೆ ಎನ್ನುವುದನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಪುಲಿಕೇಶಿನಗರದ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿದರು.
ಬೆಂಗಳೂರಿನ ಸಹಕಾರ ನಗರದ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಾನು ಟಿಕೆಟ್ ಬಗ್ಗೆ ಆಸಕ್ತಿ ಹೊಂದಿಲ್ಲ. ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. ನಾನು ಸೇರಿದಾಗಿನಿಂದ ಏನೂ ಮಾತಾಡಿಲ್ಲ ನಾನು ಪರಮೇಶ್ವರ್ ಬರಲಿ ನಮ್ಮ ಕ್ಷೇತ್ರಕ್ಕೆ ಅಂತ ಹೇಳಿದೀನಿ ಎಂದರು.
ಇದನ್ನೂ ಓದಿ:ನನ್ನ ಸೋಲಿಗೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ : ಆರ್. ಧ್ರುವನಾರಾಯಣ
ನಾನು ಯಾವುದೇ ಶರತ್ತುಗಳಿಲ್ಲದೆ ಕಾಂಗ್ರೆಸ್ ಸೇರಿದ್ದೇನೆ. ಪುಲಿಕೇಶಿನಗರದಲ್ಲಿ ಯಾರಾದರೂ ಅಭ್ಯರ್ಥಿಯಾಗಲಿ. ನನಗೆ ಅವಕಾಶ ಕೊಟ್ಟರೆ ನಾನು ಕ್ಯಾಂಡಿಡೇಟ್ ಆಗುತ್ತೇನೆ. ಯಾರೇ ಆದರೂ ಓಕೆ ಎಂದರು.
ಕ್ಷೇತ್ರದಲ್ಲಿ ಏನೇನಾಗುತ್ತಿದೆ ಅಂತ ವಿಚಾರ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಬಹಳಷ್ಟು ಬೇಸರವಿದೆ. ಕಾಂಗ್ರೆಸ್ ಗಿಂತ ಶಾಸಕರ ಮೇಲೆ ಬಹಳ ಬೇಸರವಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ನಂತರ ಶಾಸಕರ ಮೇಲೆ ಕ್ಷೇತ್ರದಲ್ಲಿ ಬೇಸರವಿದೆ. ಮುಸ್ಲಿಂ ಸಮುದಾಯದವರು ಅಖಂಡ ಬಗ್ಗೆ ಬೇಸರ ಹೊಂದಿದ್ದಾರೆ. ಮುಸಲ್ಮಾನರಿಗೆ ನಮ್ಮವರು ಜೈಲಿನಲ್ಲಿದ್ದಾರೆ, ಆದರೆ ನಮಗೆ ಸಹಾಯ ಮಾಡುತ್ತಿಲ್ಲವೆಂದು ಶಾಸಕರ ಮೇಲೆ ಬೇಸರ ಹೊಂದಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಶಾಸಕರಾಗಿ ಅವರ ಕೆಲಸ ಮಾಡಲಿ ಎಂದು ಪ್ರಸನ್ನ ಕುಮಾರ್ ಟೀಕಿಸಿದರು.
ಇದನ್ನೂ ಓದಿ: ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್