ಕೋಲ್ಕತಾ : ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಮಾಜಿ ಸಿಪಿಐ (ಎಂ) ಶಾಸಕನನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮಾಜಿ ಶಾಸಕ ಮತ್ತು ಸಿಪಿಐ(ಎಂ) ನಾಯಕ ನೀರಪಾದ ಸರ್ದಾರ್ ಅವರನ್ನು ಭಾನುವಾರ ಬೆಳಗ್ಗೆ ದಕ್ಷಿಣ ಕೋಲ್ಕತಾದ ಅವರ ಮನೆಯಿಂದ ಬಂಧಿಸಲಾಗಿದ್ದು ಮತ್ತು ವಿಚಾರಣೆಗಾಗಿ ಬನ್ಶ್ದ್ರೋನಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಸಂದೇಶಖಾಲಿ ಘಟನೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಟಿಎಂಸಿ ನಾಯಕ ಉತ್ತಮ್ ಸರ್ದಾರ್ ಅವರನ್ನು ಪೊಲೀಸರು ಬಂಧಿಸಿದ ಒಂದು ದಿನದ ನಂತರ ಸರ್ದಾರ್ ಬಂಧನವಾಗಿದೆ.
ಅಕ್ರಮ ಸಭೆಗಳನ್ನು ಆಯೋಜಿಸುವ ಮೂಲಕ ಶಿಬ್ ಪ್ರಸಾದ್ ಅಲಿಯಾಸ್ ಶಿಬು ಹಜ್ರಾ ಅವರನ್ನು ಹತ್ಯೆಗೈಯಲು ಯತ್ನಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಹಿಂಸಾಚಾರದ ನಂತರ ನೀರಪಾದ ಸರ್ದಾರ್ ಸೇರಿದಂತೆ 117 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಮಹಿಳೆಯರನ್ನು ಮನೆ ಮನೆಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ, ಗಲಾಟೆ ಸೃಷ್ಟಿಸಲು ಪ್ರಚೋದನೆ ನೀಡಿದ ಹಾಗೂ ಪ್ರತಿಭಟನೆ ಮೂಲಕ ಪೊಲೀಸರಿಗೆ ಕಿರುಕುಳ ನೀಡಿದ ಆರೋಪವೂ ಅವರ ವಿರುದ್ಧ ದಾಖಲಾಗಿದೆ.
ಶನಿವಾರದಂದು, ಬಸಿರ್ಹತ್ ಸಂಸದೀಯ ಕ್ಷೇತ್ರದ ಬಿಜೆಪಿಯ ಸಂಚಾಲಕ ಬಿಕಾಸ್ ಶಿಂಗ್ ಅವರನ್ನು ಸಹ ಹಲವಾರು ಆರೋಪಗಳ ಮೇಲೆ ಬಂಧಿಸಲಾಗಿದೆ. ಪರಾರಿಯಾಗಿರುವ ಟಿಎಂಸಿ ನಾಯಕ ಶೇಖ್ ಶಾಜಹಾನ್ ಮತ್ತು ಅವರ ಸಹಾಯಕರನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದ ಸಂದೇಶಖಾಲಿಯಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪೊಲೀಸರು ನಿಷೇಧಾಜ್ಞೆ ಹೊರಡಿಸಿದ್ದಾರೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳ ಸರಕಾರದ ವಿರುದ್ಧ ಕಿಡಿ ಕಾರಿದ್ದು, ಟಿಎಂಸಿ ಅತ್ಯಾಚಾರಿ ಪಕ್ಷ. ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ. ಇದರಲ್ಲಿ ಟಿಎಂಸಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಪಾತ್ರವಿಲ್ಲ.ಬಿಜೆಪಿ ಮಾತ್ರ ಹಿಂದೂ ರಾಷ್ಟ್ರೀಯವಾದಿಗಳಿಗೆ ಬೆಂಬಲ ನೀಡುವ ಪಕ್ಷವಾಗಿದ್ದು, ನಾವು ಸೆಕ್ಷನ್ 144 ಅನ್ನು ಪಾಲಿಸುವುದಿಲ್ಲ. ಎಲ್ಲಾ ಶಾಸಕರು, ಮಹಿಳಾ ಮೋರ್ಚಾ, ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ” ಎಂದು ಹೇಳಿದ್ದಾರೆ.