ಮೈಸೂರು : ಇಲ್ಲಿ ಶುಕ್ರವಾರ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ 4 ನೇ ವರ್ಷದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರು ವೇದಿಕೆಯಲ್ಲೇ ಟಾಂಗ್ ನೀಡಿದ ಘಟನೆ ನಡೆದಿದೆ.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳ ಕುರಿತಾಗಿನ ಸುಧೀರ್ಘ ಭಾಷಣದ ಬಳಿಕ ಭಾಷಣ ಆರಂಭಿಸಿದ ಅಂಬರೀಶ್ ಮೊದಲಿಗೆ ಮುಖ್ಯಮಂತ್ರಿಗಳಿಗೆ ಹೊಗಳಿದರು.
ಮುಖ್ಯಮಂತ್ರಿಗಳು ಸರ್ಕಾರದ ಸಾಧನೆಗಳನ್ನು, ಭಾಗ್ಯಗಳನ್ನು ಬಿಡಿಸಿ ಬಿಡಿಸಿ ಹೃದಯಕ್ಕೆ ಮುಟ್ಟುವಂತೆ ಹೇಳಿದ್ದಾರೆ. ನಿಮ್ಮ ಮತಕ್ಕೆ ನಮ್ಮ ಪ್ರತಿಫಲ ಎನ್ನುವ ಕುರಿತು ಸವಿವರವಾಗಿ ಹೇಳಿದ್ದಾರೆ. ನಾನು 230 ಸಿನಿಮಾ ಮಾಡಿದ್ದೇನೆ ಆದರೆ ಇಷ್ಟು ಮಾತಾಡಿಲ್ಲ. ನಿಷ್ಠೆ ಇದ್ರೆ ಮಾತ್ರ ಆ ತರ ಮಾತನಾಡಲು ಸಾಧ್ಯ ಎಂದರು.
ಬಳಿಕ ಅನ್ನ ಭಾಗ್ಯ .. ಕ್ಷೀರ ಭಾಗ್ಯ .. ರೈತರ ಸಾಲ ಮನ್ನಾ ಸೈಕಲ್.. ಗೂಡ್ಸು ..ಎಲ್ಲಾ ಹೇಳಿದ್ರು. ಆದ್ರೆ ನಾವು ಮಾಡಿದ ವಸತಿ ಇಲಾಖೆಯ ಸಾಧನೆಗಳ ಕುರಿತು ಒಂದು ಮಾತು ಹೇಳಿಲ್ಲ. 3 ಚಿನ್ನದ ಪದಕಗಳು ಇಲಾಖೆಗೆ ಬಂದಿವೆ. ನೀವು ಹೇಳದಿದ್ರೆ ತೊಂದರೆ ಇಲ್ಲ ಬಿಡಿ. ಜನರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಕೊನೆಗೆ
‘ಬೀರೇಶ್ವರ ದೇವರ ಮುಂದೆ ನೀಡಿದ ಮಾತು ನಡೆಸಿಕೊಡಿ’ ಎಂದು ಸಿದ್ದರಾಮಯ್ಯಗೆ ಮನವಿ ಮಾಡಿ ಎಲ್ಲರ ಕುತೂಹಲಕ್ಕೆ ಕಾರಣವಾದರು.