Advertisement

K.S. Eshwarappa: ದೇವಸ್ಥಾನಗಳನ್ನು ಒಡೆದು ಕಟ್ಟಿದ ಒಂದೇ ಒಂದು ಮಸೀದಿಯನ್ನು ಉಳಿಸುವುದಿಲ್ಲ

02:37 PM Dec 20, 2023 | Team Udayavani |

ಗದಗ: ಹಿಂದೂ ರಾಷ್ಟ್ರ ಮಾಡುವುದು ಬಿಜೆಪಿ ಅಜೆಂಡಾ ಅಲ್ಲಾ. ಹಿಂದೂ ರಾಷ್ಟ್ರ ಮಾಡುವುದು ದೇಶದ ಹಿಂದೂಗಳ ಅಜೆಂಡಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು.

Advertisement

ಗದಗದಲ್ಲಿ ಮಾತನಾಡಿದ ಅವರು, ದೇಶದ ಹಿಂದೂಗಳು ಹಿಂದೂ ರಾಷ್ಟ್ರ ಆಗಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕು ಎನ್ನುವುದು ಇವತ್ತಿನ ತೀರ್ಮಾನ ಅಲ್ಲ. ಸ್ವಾತಂತ್ರ್ಯ ಪೂರ್ವದಿಂದ ಆದ ಹೋರಾಟ. ಮಧುರಾ, ಕಾಶಿಯಲ್ಲಿ ಎಲ್ಲವನ್ನೂ ಒಡೆದು ಹಾಕಿದ್ರಲ್ಲಾ ಮುಸಲ್ಮಾನರು. ಅದನ್ನೆಲ್ಲಾ ಉಳಿಸಬೇಕೆಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವರ್ಗದಲ್ಲಿ ಇರುವುದು. ಅವರೆಲ್ಲ ಆತ್ಮಕ್ಕೆ ಈವಾಗ ಶಾಂತಿ ಸಿಗ್ತಾಯಿದೆಯಲ್ವಾ. ಜ. 22ಕ್ಕೆ ಅಯೋಧ್ಯೆಯಲ್ಲಿ ಇಡೀ ಪ್ರಪಂಚ ನೋಡುವ ಕೆಲಸ ಆಗುತ್ತದೆ ಎಂದು ಹೇಳಿದರು.

ಕಾಶಿ ಕುರಿತು ಕೋರ್ಟ್ ಆಡರ್ ಆಗಿದೆ. ಮಧುರಾ ಬಗ್ಗೆ ಸರ್ವೇ ಕೊಟ್ಟಿದ್ದಾರೆ. ದೇಶದಲ್ಲಿ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡುವುದಿಲ್ಲ. ನಮ್ಮ ದೇವಸ್ಥಾನಗಳನ್ನು ಹೊಡೆದು ಮಸೀದಿ ಕಟ್ಟಿದ್ದಾರಲ್ಲ ಆ ಮಸೀದಿ ಉಳಿಸಲ್ಲ. ಈ ದೇಶದಲ್ಲಿ ಒಂದೇ ಒಂದು ಮಸೀದಿಯನ್ನು ಉಳಿಸುವುದಿಲ್ಲ ಇದು ನನ್ನ ವೈಯಕ್ತಿಕವಾದ ಅಭಿಪ್ರಾಯ ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರಕ್ತವನ್ನು ಹಂಚಿಕೊಂಡವರು ನಾವು. ನಮ್ಮಲ್ಲಿ ಟಿಪ್ಪು ರಕ್ತ ಇಲ್ಲ. ಅಯೋಧ್ಯೆ, ಕಾಶಿ ಮಧುರಾ, ಇಂತಹ ವಿಶೇಷ ದೇವಸ್ಥಾನಗಳನ್ನು ನಾವು ಉಳಿಸುತ್ತೇವೆ ಎಂದರು.

ಸಿಎಂ ಸಿದ್ದರಾಮಯ್ಯ ಬಿಜೆಪಿ ಸುಳ್ಳಿನ ಕಾರ್ಖಾನೆ ಹೇಳಿಕೆ ವಿಚಾರಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಸುಳ್ಳಿನ ಕಾರ್ಖಾನೆ ಅಂತಾ ಹೇಳ್ತಾರೆ, ಅದನ್ನು ಜನ ನಂಬಿದ್ರಾ.? ಮೂರು ರಾಜ್ಯದಲ್ಲಿ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು? ಈವಾಗ ಜಿನ್ನಾ ಸಂತತಿಯ ಸಚಿವ ಜಮೀರ್ ಅಹ್ಮದ್, ತೆಲಂಗಾಣದಲ್ಲಿ ಏನೂ ಹೇಳಿದಾ ರಾಜ್ಯದಲ್ಲಿ ಮುಸಲ್ಮಾನರನ್ನು ಒಂದು ಮಾಡಿದ್ದೇವೆ, ಮುಸಲ್ಮಾನ ಇಬ್ಬರನ್ನೂ ಸ್ಪೀಕರ್ ಸ್ಥಾನದಲ್ಲಿ ಕೂರಿಸಿದ್ದೇವೆ. ಎಲ್ಲಾ ಶಾಸಕರು ಅವರಿಗೆ ನಮಸ್ಕಾರ ಮಾಡಬೇಕು. ನಾವು ಮುಸಲ್ಮಾನರನ್ನು ನಮಸ್ಕಾರ ಮಾಡಿಕೊಂಡು ಹೋಗುತ್ತೇವೆ ನಾವು, ಇಲ್ಲಾ ಆ ಸಭಾಪತಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅದನ್ನು ಪ್ರೋತ್ಸಾಹ ಮಾಡುತ್ತಾರೆ. ಅವರು ಹೇಳಿರೋದು ಸರಿ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Advertisement

ನಾಳೆ ಹಿಂದೂ ರಾಷ್ಟ್ರ ಆಗುತ್ತದೆ ಅಂತಾ ನಾ ಹೇಳಲ್ಲಾ. ಇದು ಹಿಂದೂ ರಾಷ್ಟ್ರವೇ, ಇದು ಹಿಂದೂ ರಾಷ್ಟ್ರ ಆಗಿ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next