Advertisement

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಗಡಿ ಮೀರಿದೆ

04:59 PM Sep 28, 2022 | Team Udayavani |

ಹೊಳೆನರಸೀಪುರ: ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಲೂಟಿಕೋರರ ಕೈ ಸೇರಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಸಚಿವ ಎಚ್‌ .ಡಿ.ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ನೇರವಾಗಿ ಆರೋಪಿಸಿದರು.

Advertisement

ಅವರು ಪಟ್ಟಣದ ಗಣಪತಿ ಪೆಂಡಾಲಿನ ಸಾಂಸ್ಕೃತಿ ವೇದಿಕೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.90ರಷ್ಟು ಹಾಗೂ ದ್ವಿತೀಯ ಪಿಯುಸಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದು, ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಶಿಕ್ಷಣಕ್ಕೆ ಜೆಡಿಎಸ್‌ ಒತ್ತು: ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರನ್ನು ಗೌರವಿಸಿದ ನಂತರ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಭವಾನಿ ರೇವಣ್ಣ ಅವರು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಮೊದಲ ಸ್ಥಾನ ತರುವಲ್ಲಿ ಶ್ರಮಿಸಿದ್ದರು ಎಂದರು. ಜೊತೆಗೆ ಶೀಘ್ರದಲ್ಲೇ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರನ್ನ ಗೌರವಿಸುವುದಾಗಿ ತಿಳಿಸಿದರು.

65 ಕೋಟಿ ವೆಚ್ಚ: ತಾವು ಶಾಸಕರಾದ ಮೇಲೆ ಹೊಳೆನರಸೀಪುರ ಪಟ್ಟಣದ ಸಮಗ್ರ ಅಭಿವೃದ್ಧಿಗೆ 65 ಕೋಟಿ ರೂ.ವೆಚ್ಚ ಮಾಡುತ್ತಿದೆ. ಅದರಲ್ಲಿ ಪಟ್ಟಣಕ್ಕೆ ದಿನ 24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ಜೊತೆಯಲ್ಲಿ 95 ಕೋಟಿ ವೆಚ್ಚ ದಲ್ಲಿ ಒಳಚರಂಡಿ ಕಾಮಗಾರಿಯೂ ಸಹ ನಡೆಯುತ್ತಿದೆ ಎಂದರು. ಹಾಸನಕ್ಕೆ ಬರಬೇಕಿದ ಐಐಟಿಯಂತಹ ಪ್ರತಿಷ್ಠಿತ ಯೋಜನೆ ಗಳು ಕೈತಪ್ಪಿ ಹೋಗಿದ್ದು, ಅವರುಗಳನ್ನು ಮುಂದಿನ ದಿನಗಳಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ರನ್ನು ಗೌರವಿಸಿ ಸನ್ಮಾನಿಸಿದರು.

Advertisement

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಎಸ್‌. ಕುಮಾರಸ್ವಾಮಿ ಅವರು ತಮ್ಮ ಸಂಘದ ಬೇಡಿಕೆ ಈಡೇರಿಸಿಕೊಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ.ಕೆ. ಕೃಷ್ಣಮೂರ್ತಿ, ತಾಪಂ ಇಒ ಗೋಪಾಲ್‌, ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷೆ ಜಿ.ಕೆ.ಸುಧಾ ನಳಿನಿ, ಮುಖ್ಯಾಧಿಕಾರಿ ವಿ.ಡಿ.ಶಾಂತಲಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಜಿಲ್ಲಾ ಗೌರವಾಧ್ಯಕ್ಷ ತಮ್ಮಣ್ಣಗೌಡ, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ , ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಘು, ಡಾ.ಲಕ್ಷ್ಮೀಕಾಂತ, ತಾಲೂಕು ವೈದ್ಯಾಧಿಕಾರಿ ರಾಜೇಶ್‌, ಪುಟ್ಟಸೋಮಪ್ಪ, ತಾಲೂಕು ಕಸಾಪ ಅಧ್ಯಕ್ಷ ಪುಟ್ಟೇಗೌಡ, ಸಮಿತಿ ಕಾರ್ಯಾಧ್ಯಕ್ಷ ಪುಟ್ಟಸೋಮಪ್ಪ ಮೊದ ಲಾದವರಿದ್ದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ.ಕೆ. ಕೃಷ್ಣಮೂರ್ತಿ, ವೈದ್ಯ ಲಕ್ಷ್ಮೀಕಾಂತ್‌ , ಡಾಕ್ಟರ್‌ ರಾಜೇಶ್‌ ಸೇರಿ ದಂತೆ ಸರ್ಕಾರಿ ನೌಕರರ ಸಂಘದ ಅನೇಕ ಪದಾಧಿಕಾರಿಗಳು ಹಾಡುವ ಮೂಲಕ ಸಬಿಕರನ್ನು ರಂಜಿಸಿದರು.

ಶಿಕ್ಷಣಕ್ಕೆ 5 ಸಾವಿರ ಕೋಟಿ ಮೀಸಲು : ಕುಮಾರಸ್ವಾಮಿ ಅವರ ಸರ್ಕಾರ ಇದ್ದ ವೇಳೆ ಶಿಕ್ಷಣಕ್ಕಾಗಿ 5 ಸಾವಿರ ಕೋಟಿ ಕಾಯ್ದಿರಿಸಲಾಗಿತ್ತು. ಅದರಲ್ಲಿ ರಾಜ್ಯಾದ್ಯಂತ 4 ಸಾ ವಿರ ಕೋಟಿ ವೆಚ್ಚ ದಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ ಸಂಸ್ಥೆ ಆರಂಭಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಅದು ಸಂಪೂ ರ್ಣ ಕೈಗೂಡಲಿಲ್ಲ. ಇದನ್ನು ಈಡೇರಿಸಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಮಾರಣ್ಣ ಅವರು ಸರ್ಕಾರ ಅಧಿಕಾರ ಕ್ಕೆ ತರುವುದು ತಮ್ಮ ಸಂಕಲ್ಪವಾಗಿದೆ ಎಂದು ಮಾಜಿ ಸಚಿವ ರೇವಣ್ಣ ಸ್ಪಷ್ಟ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next