Advertisement

ಎಕ್ಸ್‌ಪ್ರೆಸ್‌ವೇಗೆ ಕಾಂಗ್ರೆಸ್‌ ಕಾರಣ

01:50 PM Mar 11, 2023 | Team Udayavani |

ಮೈಸೂರು: ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತ್ತು ನಾನು ಕಾರಣ. ಆದರೆ ಈಗ ಸಂಸದ ಪ್ರತಾಪ್‌ ಸಿಂಹ ಅಪಪ್ರಚಾರ ಮಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

Advertisement

ನಗರದ ಹೊರ ವಲಯದ ಸಿದ್ದಲಿಂಗಪುರ ಬಳಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗ ಳೂ ರು-ಮೈಸೂರು ಹೆದ್ದಾರಿ 2013ರವರೆಗೂ ರಾಜ್ಯ ಹೆದ್ದಾರಿ ಆಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದುದ್ದನ್ನು ಮಾನದಂಡವಾಗಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಯಿತು. ಕೆಆರ್‌ ಡಿಸಿಎಲ್‌ ಮೂಲಕ ನಾಲ್ಕು ಪಥವಾಗಿ ಮಾಡಿದರೂ ಒತ್ತಡ ಹೆಚ್ಚಾದ್ದರಿಂದ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಡಿಪಿಆರ್‌ ತಯಾರಿಸಲು ನಿರ್ಧರಿಸಲಾಯಿತು.

ಯಾವುದೇ ವ್ಯಕ್ತಿ ಶಾಶ್ವತವೂ ಅಲ್ಲ: ರಾಜ್ಯದ 1,882 ಕಿಮೀ ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಮಾ.4ರಂದು 2014ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಬೊಗಳೆ ಬಿಡುವವರು ಆಗ ಸಂಸದರೇ ಆಗಿರಲಿಲ್ಲ. ಆಸ್ಕರ್‌ ಫ‌ರ್ನಾಂಡೀಸ್‌ ಕೇಂದ್ರದಲ್ಲಿ ಸಚಿವರಾ ಗಿದ್ದರು. ಅಭಿವೃದ್ಧಿ ಕೆಲಸ ಎಂಬುದು ಪಕ್ಷದ ಭಿಕ್ಷೆ ಅಲ್ಲ. ಯಾವುದೇ ವ್ಯಕ್ತಿ ಶಾಶ್ವತವೂ ಅಲ್ಲ. ನನ್ನ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎನ್ನು ವವರಿಗೆ ಪರಿಜ್ಞಾನ ಇರಬೇಕು ಎಂದರು.

2 ಸಾವಿರ ಎಕರೆ ಜಮೀನು ಸ್ವಾಧೀನ: ಕಾಮ ಗಾರಿಗಾಗಿ ರಾಮನಗರದಲ್ಲಿ ಕಚೇರಿ ತೆರೆದು 2 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಂ ಡೆವು. ಸರ್ವೆ ಮಾಡಿಸಿದೆವು. ತಾಂತ್ರಿಕ ವರದಿ ಯನ್ನೂ ಸಲ್ಲಿಸಿದೆವು. ಯೋಜನೆ ಜಾರಿಗೆ ನಮ್ಮ ಸರ್ಕಾರ ಕಾರಣ. ಇದೀಗ ಬಿಜೆಪಿ ತನ್ನದೆಂದು ಕ್ರೆಡಿಟ್‌ ತೆಗೆದುಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಡೆಸಲಾಗುತ್ತಿದೆ. 2014ರ ಮಾ.4 ರಂದು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಯಿತು. ಈಗ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳಲು ಆರೇಳು ತಿಂಗಳು ಬೇಕು. ಸಿದ್ದಲಿಂಗಪುರದಲ್ಲಿ ಮೋರಿ ಇತ್ತು ಅದನ್ನು ಮುಚ್ಚಿ ರಸ್ತೆ ಮೇಲೆ ಮೋರಿ ನೀರು ಹರಿಯುವಂತೆ ಮಾಡಿದ್ದಾರೆ. ಮೈಸೂರು ಸಂಸದರಿಗೆ ಕೇವಲ ಏಳು ಕಿಮೀ ಮಾತ್ರವೇ ಬರುತ್ತದೆ. ಆದ್ದರಿಂದ ನರಿ ಬುದ್ಧಿ ಪ್ರದರ್ಶಿಸದೇ, ಕೆಲಸ ಮಾಡಿದವರನ್ನು ಶ್ಲಾಘಿಸಿ. ಟೀಕೆಯನ್ನು ಆರೋಗ್ಯಕರವಾಗಿ ಮಾಡಿ. ಸುಳ್ಳು ಹೇಳುವುದು ಹಾಗೂ ರಾಜಕೀಯ ಲಾಭ ಪಡೆಯುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಯೋಜನೆ ಮೊತ್ತ ಹೆಚ್ಚಾಗಿದೆ. ರೈತರಿಗೆ ಜಮೀನಿಗೆ ತೆರಳಲು ಅವಕಾಶ ನೀಡಿಲ್ಲ. ಚುನಾ ವಣೆ ಕಾರಣಕ್ಕೆ ತರಾತುರಿಯಲ್ಲಿ ಉದ್ಘಾಟಿಸ ಲಾಗುತ್ತಿದೆ ಎಂದು ಆರೋಪಿಸಿದರು. ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ಜಯಕುಮಾರ್‌, ಜಿ.ವಿ.ಸೀತಾರಾಂ, ಮಾವಿನಹಳ್ಳಿ ಸಿದ್ದೇಗೌಡ, ಅಯೂಬ್‌ ಖಾನ್‌ ಇತರರು ಇದ್ದರು.

ಸಿಂಹ ಕಾಂಗ್ರೆಸ್‌ ಕ್ಷಮೆಯಾಚಿಸಬೇಕು : ಕೆಪಿ ಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಮಾತ ನಾಡಿ, ಕಾಮಗಾರಿ ಅವೈಜ್ಞಾನಿಕವಾಗಿ ಇರುವುದರಿಂದ ಅಪಘಾತ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ 90 ಸಾವಿರ ವಾಹನ ಸಂಚರಿಸುತ್ತವೆ. 5.3 ಕೋಟಿ ಟೋಲ್‌ ಸಂಗ್ರಹವಾಗುತ್ತದೆ. ವರ್ಷಕ್ಕೆ 2,440 ಕೋಟಿ ಆಗುತ್ತದೆ. ಒಟ್ಟಾರೆ ಯೋಜನೆಗೆ 12 ಸಾವಿರ ಕೋಟಿಯಾದರೂ 8 ಸಾವಿರ ಕೋಟಿ ಹೆಚ್ಚಿಸಲಾಗಿದೆ. ನಮ್ಮ ಸರ್ಕಾರ ಡಿಪಿಆರ್‌ಗೆ 6.50 ಕೋಟಿ ಸೇರಿದಂತೆ ಒಟ್ಟು 13 ಕೋಟಿ ಕೊಟ್ಟಿದೆ. ಒಂಬತ್ತೂವರೆ ಪೈಸೆ ಕೊಟ್ಟಿದ್ದರೆ ಹೇಳಲಿ ಎಂದಿರುವ ಪ್ರತಾಪ ಸಿಂಹ ಕೂಡಲೇ ಕಾಂಗ್ರೆಸ್‌ ಕ್ಷಮೆಯಾಚಿಸಬೇಕು ಎಂದು ಹೇಳಿದರು.

ದಶ ಪಥ ಯೋಜನೆ ವಿಷಯದಲ್ಲಿ ಬಿಜೆಪಿಯವರು ಮಾಡುತ್ತಿರುವ ಅಪಪ್ರಚಾರವನ್ನು ಖಂಡಿಸುತ್ತೇನೆ. ರಾಜಕೀಯವಾಗಿ ಲಾಭ ಪಡೆದುಕೊಳ್ಳಲು ಸುಳ್ಳುಗಳನ್ನು ಹೇಳುವುದು ನಮ್ಮ ಜಾಯಮಾನ ದಲ್ಲೇ ಬಂದಿಲ್ಲ. ಅದೇನಿದ್ದರೂ ಬಿಜೆಪಿಯವರ ಕೆಲಸ. – ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next