ಗಂಗಾವತಿ: ಶಿವಮೊಗ್ಗ ನಗರದ ಯುವಕ ಹರ್ಷವರ್ಧನ್ ಕೊಲೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ಪಾತ್ರ ಎದ್ದು ಕಾಣುತ್ತಿದ್ದು ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಬಂಧಿಸುವಂತೆ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಸೋಮವಾರ ಗಂಗಾವತಿಯ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಚಿವ ಈಶ್ವರಪ್ಪನವರ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತದ ಹೆಮ್ಮೆಯ ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜವನ್ನು ಇಳಿಸಿ ಕೇಸರಿ ಧ್ವಜವನ್ನು ಹಾರಿಸುವುದಾಗಿ ಹೇಳಿಕೆ ನೀಡಿರುವ ಈಶ್ವರಪ್ಪ ಒಬ್ಬ ದೇಶದ್ರೋಹಿಯಾಗಿದ್ದಾರೆ .ಸರಕಾರ ಅವರ ಪರವಾಗಿ ನಿಂತಿರುವುದು ಖಂಡನೀಯ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು .ಶಿವಮೊಗ್ಗದಲ್ಲಿ ಜರುಗಿದ ಹರ್ಷ ಅವರ ಕೊಲೆ ಪ್ರಕರಣವನ್ನು ನೇರವಾಗಿ ಮುಸಲ್ಮಾನ ಯುವಕರು ಮಾಡಿದ್ದಾರೆಂದು ಹೇಳುವ ಈಶ್ವರಪ್ಪ ಗಂಗಾವತಿಯಲ್ಲಿ ಮುಸ್ಲಿಂ ಯುವಕರಿಗೆ ಬಿಜೆಪಿ ಕಾರ್ಯಕರ್ತರು ಹೊಡಿಬಡಿಮಾಡಿ ಚೂರಿ ಇರಿತ ಮಾಡಿದ್ದಾರೆ ಇದು ಈಶ್ವರಪ್ಪನವರೇ ಕಣ್ಣಿಗೆ ಕಾಣಲಿಲ್ಲವೇ .ಆದ್ದರಿಂದ ಕೂಡಲೇ ರಾಜ್ಯಪಾಲರು ಸಚಿವ ಸಂಪುಟದಿಂದ ವಜಾ ಮಾಡಬೇಕು .ಅವರನ್ನು ಕೊಲೆ ಆರೋಪದಲ್ಲಿ ಬಂಧಿಸುವಂತೆ ಅನ್ಸಾರಿಯವರು ಒತ್ತಾಯಿಸಿದರು .
ಮಾಜಿ ಸಂಸದ ಎಸ್ ಶಿವರಾಮನಗೌಡ ಕಾಂಗ್ರೆಸ್ ಮುಖಂಡರಾದ ಶಾಮೀದ್ ಮನಿಯಾರ್ ,ಬ್ರೇಸ್ ಗೋನಾಳ್ ಮನೋಹರ್ ಸ್ವಾಮಿ ಫಕೀರಪ್ಪ ಯಮಿ ಸಲ್ಮಾ ಬಿಚ್ಗತ್ತಿ, ನೀಲಕಂಠಪ್ಪ ಹೊಸಳ್ಳಿ ,ಕೆ ರಾಘವೇಂದ್ರ, ಎಸ್ ಬಿ ಖಾದ್ರಿ ಅರ್ಜುನ್ ನಾಯಕ, ಸೋಮನಾಥ ಭಂಡಾರಿ ,ಹನುಮಂತಪ್ಪ ವಳಬಳ್ಳಾರಿ ,ಕಮ್ಲಿಬಾಬಾ ,ರೇಣುಕನಗೌಡ, ಅಂಬಿಗೇರ್ ಅಂಜಿನಪ್ಪ ಸೇರಿ ಅನೇಕರಿದ್ದರು .