Advertisement

ನಾನೇ ಜೆಡಿಎಸ್‌ ಅಭ್ಯರ್ಥಿ: ಎ.ಮಂಜು ಘೋಷಣೆ

02:52 PM Mar 08, 2023 | Team Udayavani |

ಅರಕಲಗೂಡು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿ ನಾನೇ ಎಂದು ಮಾಜಿ ಸಚಿವ ಎ.ಮಂಜು ಅವರು ಘೋಷಿಸಿಕೊಂಡರು.

Advertisement

ತಮ್ಮ ಸ್ವಗ್ರಾಮ ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದಲ್ಲಿ ಮಂಗಳವಾರ ಕರೆದಿದ್ದ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅಧಿಕೃತವಾಗಿ ತಾವು ಸ್ಪರ್ಧೆಗಿಳಿಯುವುದಾಗಿ ಘೋಷಿಸಿಕೊಂಡು ತಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಕೇಳಿಕೊಂಡರು.

ಸಭೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿದ ಅವರು ಇಷ್ಟು ದಿನ ನನ್ನೆಲ್ಲಾ ಮುಖಂಡರು, ಕಾರ್ಯಕರ್ತರು, ಹಾಗೂ ಅಭಿಮಾನಿಗಳು ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುವೆ ಎಂದು ಹೇಳುತ್ತಿದ್ದ ಎ.ಮಂಜು ಅವರು, ತಮ್ಮ ನಿವಾಸದ ಬಳಿ ಮಂಗಳವಾರ ಸೇರಿಸಿದ್ದ ಬೆಂಬಲಿಗರ ಸಭೆಯಲ್ಲಿ ನೀವೆಲ್ಲ ಹೇಳಿದ ಹಾಗೆ ನಾನು ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ. ನೀವುಗಳೂ ಸಹ ನನ್ನೊಂದಿಗೆ ಇರಬೇಕು ಎಂದು ಮನವಿ ಮಾಡಿದರು.

ಬೆಂಬಲಿಗರಿಂದ ಪ್ರಮಾಣ: ಇಂದಿನಿಂದ ನಾವೆಲ್ಲರೂ ಜೆಡಿಎಸ್‌ ಪರವಾಗಿ ಪಕ್ಷಕ್ಕೆ ಸೇರಿ ಮಂಜು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು. ನಮ್ಮ, ನಮ್ಮ ಊರುಗಳಲ್ಲಿ ನಾವೆಲ್ಲರೂ ಕೂಡ ಜೆಡಿಎಸ್‌, ನಾವು ಮಂಜಣ್ಣನವರನ್ನು ಜೆಡಿಎಸ್‌ ಪಕ್ಷದಿಂದ ಗೆಲ್ಲಿಸುತ್ತೇವೆ. ಇನ್ನು ಮೇಲೆ ನಾವೆಲ್ಲರೂ ಜೆಡಿಎಸ್‌ ಎಂಬ ಘೋಷಣೆಯೊಂದಿಗೆ ಕೈ ಮುಂದೆ ಚಾಚಿ ನೂರಾರು ಮಂದಿ ಪ್ರಮಾಣ ಮಾಡಿದರು. ಸಭೆಯ ನಂತರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಎ.ಮಂಜು ಅವರ ಪರ ಕಾರ್ಯಕರ್ತರು ಘೋಷಣೆ ಕೂಗಿದರು.

ವರಿಷ್ಠರನ್ನು ಭೇಟಿ ಮಾಡಿದ್ದ ಎ.ಮಂಜು: ಕಳೆದ ಕೆಲ ದಿನಗಳ ಹಿಂದೆ ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆರೋಗ್ಯವನ್ನು ವಿಚಾರಿಸಲು ಬೆಂಗಳೂರಿನಲ್ಲಿ ದೇವೇಗೌಡರ ನಿವಾಸಕ್ಕೆ ಮಾಜಿ ಸಚಿವ ಎ.ಮಂಜು ಭೇಟಿ ನೀಡಿದ್ದರು. ಇದೇ ವೇ ಳೆ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸಿ ದೇವೇಗೌಡರಿಂದ ಆಶೀ ರ್ವಾದ ಪಡೆದರು. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಉಪಸ್ಥಿತರಿದ್ದ ಫೋಟೋಗಳೂ ವೈರಲ್‌ ಆಗುತ್ತಿವೆ.

Advertisement

ಮಾ.16 ಕ್ಕೆ ಪಂಚರತ್ನ : ಎ.ಮಂಜು ಅವರು ಬೆಂಗ ಳೂರಿನಲ್ಲಿ ಮಾ.11 ಅಥವಾ 12 ರಂದು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ. ಅನಂತರ ಮಾ.16 ರಂದು ಅರಕಲ ಗೂಡು ತಾಲೂಕಿ ನಲ್ಲಿ ಸಂಚರಿಸಲಿರುವ ಪಂಚರತ್ನ ಯಾತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿಸಿ ಶಕ್ತಿಪ್ರದ ರ್ಶನ ಮಾಡಲು ಎ.ಮಂಜು ಅವರು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next