Advertisement

ಮಾಜಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ನಿಧನ

09:45 AM May 20, 2019 | Sriram |

ಬೆಳಗಾವಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಹಿಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಸಂಭಾಜಿ ಪಾಟೀಲ 1990 ರಲ್ಲಿ ಮಹಾಪೌರರಾಗಿದ್ದಾಗ ಹಿಡಕಲ್ ಜಲಾಶಯದಿಂದ ಬೆಳಗಾವಿಗೆ ನೀರು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಗ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಕೇಸರಿಪೇಟಾ ತೊಡಿಸಿ ಬಹಿರಂಗವಾಗಿ ಸನ್ಮಾನ ಮಾಡಿದ ಮೊದಲ ಎಂಇಎಸ್ ಮಹಾಪೌರ ಹಾಗೂ ನಾಯಕ ಎಂಬ ಕೀರ್ತಿ ಸಂಭಾಜಿ ಅವರದ್ದಾಯಿತು. ಎಂಇಎಸ್ ನಾಯಕರಾಗಿದ್ದರೂ ಕನ್ನಡ ಭಾಷಿಕ ಜನರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದರು‌ ಬೆಳಗಾವಿ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದ ಸಂಭಾಜಿ ಕನ್ನಡಿಗರ ಜೊತೆ ನಿಂತ ಪರಿಣಾಮ 1991 ರಲ್ಲಿ ಬೆಳಗಾವಿ ಮಹಾನಗರಪಾಲಿಕೆ ಮೊಟ್ಟಮೊದಲ ಕನ್ನಡ ಮೇಯರ್ ಅವರನ್ನು ಕಂಡಿತು. ಆಗ ಎಂಇಎಸ್ ನ ಸಂಭಾಜಿ ಸೇರಿದಂತೆ ಆರು ಜನ ಸದಸ್ಯರ ಬೆಂಬಲದಿಂದ ಸಿದ್ದನಗೌಡ ಪಾಟೀಲ ಮೊದಲ ಕನ್ನಡ ಮೇಯರ್ ಆದರು. ಈ ಮೂಲಕ ಸಂಭಾಜಿ ಬೆಳಗಾವಿ ಯಲ್ಲಿ ಭಾಷಾ ರಾಜಕಾರಣದ ಧ್ರುವೀಕರಣ ಕ್ಕೆ ಕಾರಣರಾದರು.

Advertisement

Udayavani is now on Telegram. Click here to join our channel and stay updated with the latest news.

Next