Advertisement

ಬುದ್ದಿಜೀವಿಗಳ ಸದನಕ್ಕೆ ಅರ್ಹರನ್ನು ಆಯ್ಕೆ ಮಾಡಿ: ಮಾಜಿ ಶಾಸಕ ಕೆ.ವೆಂಕಟೇಶ್

07:42 PM Mar 25, 2022 | Team Udayavani |

ಪಿರಿಯಾಪಟ್ಟಣ : ಬುದ್ದಿಜೀವಿಗಳ ಸದನವಾದ ವಿಧಾನ ಪರಿಷತ್ತಿಗೆ ವಿದ್ಯಾವಂತ ವರ್ಗದ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬಲ್ಲ ಶಿಕ್ಷಣತಜ್ಞ ಮಧು ಜಿ.ಮಾದೇಗೌಡರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಡಿದ್ದು ಇವರ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಮನವಿ ಮಾಡಿದರು.

Advertisement

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಹಾಗೂ ತಾಲೂಕು ವಕೀಲರ ಭವನದಲ್ಲಿ ವಕೀಲರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತ ಹಾಗೂ ಜನಸಾಮಾನ್ಯರ ಪರವಾಗಿ ಹೋರಾಟ ಮಾಡಿದ ಜಿ.ಮಾದೇಗೌಡರ ಸುಪುತ್ರ ಶಿಕ್ಷಣ ತಜ್ಞ ಮಧು ಜಿ.ಮಾದೇಗೌಡರು ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸಿ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಪಡೆದು ಈ ಬಾರಿ ನಮ್ಮ ಪಕ್ಷದ ಬೆಂಬಲದಿಂದ ದಕ್ಷಿಣ ಪದವಿಧರರ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದಾರೆ. ಇವರು ನಾಲ್ಕು ಜಿಲ್ಲೆಗಳಲ್ಲಿ ಸಂಚಾರ ಮಾಡಿ 48 ಸಾವಿರ ಪದವಿಧರರನ್ನು ನೊಂದಣಿ ಮಾಡಿಸಿದ್ದಾರೆ. ಆದ್ದರಿಂದ ಜೂನ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇವರ ಗೆಲುವಿಗೆ ಶ್ರಮಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಹಾಗೂ ನಂತರದ ದಿನಗಳಲ್ಲಿ ವಕೀಲರ ಪಾತ್ರ ಸಾಕಷ್ಟಿದೆ. ಪದವಿಧರರು, ವಕೀಲರು, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಬುದ್ದಿಜೀವಿಗಳ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬಲ್ಲ, ಸರಳ ಸಜ್ಜನಿಕೆಯ, ಭಾರತೀಯ ವಿದ್ಯಸಂಸ್ಥೆಯ ಅಧ್ಯಕ್ಷ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಧು ಮಾದೇಗೌಡರನ್ನು ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಆದ್ದರಿಂದ ಇವರಿಗೆ ತಮ್ಮ ಅಮೂಲ್ಯವಾದ ಮೊದಲ ಪ್ರಾಶಸ್ಯದ ಮತವನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮಾಡಬೇಕು ಎಂದರು.

ಅಭ್ಯರ್ಥಿ ಮಧು ಮಾದೇಗೌಡ ಮಾತನಾಡಿ ದಕ್ಷಿಣ ಪದವಿಧರರ ಕ್ಷೇತ್ರಕ್ಕೆ ಒಳಪಡುವ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ವಿವಿಧ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಎಲ್ಲಾ ವಿದ್ಯಾವಂತ ವರ್ಗದ ಶಿಕ್ಷಕರು, ಉಪನ್ಯಸಕರು, ವಕೀಲರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳನ್ನು ಭೇಟಿಯಾಗಿ 45 ಸಾವಿರ ಮತದಾರರನ್ನು ನೊಂದಣಿ ಮಾಡಿಸಿದ್ದೇನೆ. ಪಿರಿಯಾಪಟ್ಟಣದಲ್ಲಿ 2500 ಮತದಾರು ನೊಂದಣಿಯಾಗಿರುವುದು ಸೇರಿ 4 ಜಿಲ್ಲೆಗಳಿಂದ 1.33 ಲಕ್ಷ ಪದವಿದರ ಮತದಾರರ ನೊಂದಣಿಯಾಗಿದ್ದು, ಕಳೆದ 35 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ನೇರವಾಗಿ ಚುನಾವಣೆಯಲ್ಲಿ ಭಾಗಿಯಾಗುತ್ತಿರಲಿಲ್ಲ, ಆದರೆ ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳು ಹಾಗೂ ನಮ್ಮ ತಂದೆ ಜಿ.ಮಾದೇಗೌಡರು ಮಾಡಿರುವ ರೈತ ಪರ ಹೋರಾಟಗಳು ಹಾಗೂ ಜನಪರ ಕೆಲಸಗಳಿಂದ ಜನತೆ ಬೆಂಬಲ ಸೂಚಿಸಿದ್ದಾರೆ ಈ ಚುನಾವಣೆಯು ಮುಂದಿನ ಚುನಾವಣೆ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಆದ್ದರಿಂದ ಎಲ್ಲಾ ವರ್ಗದ ಬುದ್ದಿಜೀವಿಗಳು ನನ್ನ ಗೆಲುವಿಗೆ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಸತೀಶ್, ವಕೀಲರಾದ ಬಿ.ವಿ.ಜವರೇಗೌಡ, ಕೆ.ಭಾಸ್ಕರ್, ಎಂಸಿ.ಹರೀಶ್ ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಸುಭಾಸ್, ಪ್ರಧಾನ ಕಾರ್ಯದರ್ಶಿ ಬಿ.ಎನ್.ಹರೀಶ್, ಖಜಾಂಚಿ ಮಾದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಎಸ್ಸಿಘಟಕದ ಅಧ್ಯಕ್ಷ ಪಿ.ಮಹದೇವ್, ಮುಖಂಡರಾದ ಹಿಟ್ನಳ್ಳಿ ಪರಮೇಶ್, ಬಿ.ಜೆ.ಬಸವರಾಜು, ಎ.ಕೆ.ಗೌಡ, ಜೆ.ಮೋಹನ್, ಪಿ.ಎಸ್.ಉಪೇಂದ್ರ, ಮೊಹದೇಶ್, ಮುರಳೀಧರ್, ಕೃಷ್ಣ, ಪಿ.ಎಸ್.ರವಿ, ಪ್ರಕಾಶ್, ಮಂಜುನಾಥ್, ಚಾಮರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next