Advertisement

ಗುಬ್ಬಿ ಶಾಸಕ ಶ್ರೀನಿವಾಸ್ ಕ್ಷಮೆಗೆ ಮಾಜಿ ಜೆಡಿಎಸ್ ಶಾಸಕ ಸುಧಾಕರ ಲಾಲ್ ಆಗ್ರಹ

05:49 PM Jun 16, 2022 | Team Udayavani |

ಕೊರಟಗೆರೆ: ರೈತಪರ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಣ್ಣ ವಿರುದ್ದ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ನೀಡಿರುವ ನಿಂದನೆಯೇ ಹೇಳಿಕೆ ಖಂಡನೀಯ. ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ತಕ್ಷಣ ಜೆಡಿಎಸ್ ಕಾರ್ಯಕರ್ತರ ಕ್ಷಮೆಯಾಚನೆ ಮಾಡಬೇಕು ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್ ಆಗ್ರಹಿಸಿದ್ದಾರೆ.

Advertisement

ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ಸಚಿವ ಸ್ಥಾನ ಅನುಭವಿಸಿ ಈಗ ಪಕ್ಷದ ವರಿಷ್ಠರ ವಿರುದ್ದವಾಗಿ ಹೇಳಿಕೆ ನೀಡಿರುವುದು ಶೋಭೆ ತರುವುದಿಲ್ಲ. ಪಕ್ಷ ಬಿಡುವುದು ಅವರ ವೈಯಕ್ತಿಕ ವಿಚಾರ. ಆದರೇ ಪಕ್ಷವನ್ನು ನಿಂದನೆ ಮಾಡಿರುವುದೇ ಖಂಡನೀಯ. ರಾಜ್ಯದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಕ್ಷಮೆ ಕೇಳುಬೇಕು ಎಂದರು.

ತುಮಕೂರು ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ತುಮಕೂರು ಜಿಲ್ಲೆಯ ನಾಯಕತ್ವವನ್ನು ಜೆಡಿಎಸ್ ಪಕ್ಷದ ವರಿಷ್ಠರು ಶ್ರೀನಿವಾಸ್‌ಗೆ ನೀಡಿ ಗೌರವ ನೀಡಿದ್ದಾರೆ. ಪಕ್ಷದ ಚಿಹ್ನೆಯ ಮೂಲಕ ಶಾಸಕರಾಗಿ, ನಂತರ ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದು ನೋವಿನ ವಿಚಾರ ಎಂದರು.

ಕೊರಟಗೆರೆ ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು ಮಾತನಾಡಿ, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ನಮ್ಮ ಧಿಕ್ಕಾರವಿರಲಿ. 20 ವರ್ಷದಿಂದ ಜೆಡಿಎಸ್ ಪಕ್ಷದ ಚಿಹ್ನೆಯ ಅಡಿಯಲ್ಲಿ ಶಾಸಕ, ಸಚಿವರಾಗಿ ಈಗ ವರಿಷ್ಠರ ವಿರುದ್ದವಾಗಿ ಮಾತನಾಡುವ ಹಕ್ಕು ಇಲ್ಲ. ಯಾವುದೇ ಪಕ್ಷದ ಚಿಹ್ನೆಯಿಲ್ಲದೇ ಈಗ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಟಿಯಲ್ಲಿ ಕೊರಟಗೆರೆ ಜೆಡಿಎಸ್ ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಪಪಂ ಅಧ್ಯಕ್ಷ ಕಾವ್ಯ ರಮೇಶ್, ಉಪಾಧ್ಯಕ್ಷ ಭಾರತಿ ಸಿದ್ದಮಲ್ಲಪ್ಪ, ಪಪಂ ಸದಸ್ಯ ಲಕ್ಷ್ಮೀ ನಾರಾಯಣ್, ಪುಟ್ಟನರಸಪ್ಪ ಮುಖಂಡರಾದ ಕಾಮರಾಜು, ಪ್ರಕಾಶ್, ಕೌಶಿಕ್, ಹನುಮಂತರಾಜು, ಕಲೀವುಲ್ಲಾ ಸೇರಿದಂತೆ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next