ನೇತ್ರಾವಲ್ಕರ್ ಎಂಬ ಸಾಫ್ಟ್ವೇರ್ ಎಂಜಿನಿಯರ್ ಜೀವನದಲ್ಲಿ ನಡೆದಿದೆ. ಈ ವ್ಯಕ್ತಿ ಮೊದಲು 19 ವಯೋಮಿತಿಯೊಳಗಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು, ಮುಂಬೈ ಪರ ಒಂದು ರಣಜಿ ಪಂದ್ಯವನ್ನೂ ಆಡಿದ್ದರು. ನಂತರ ಅದೆಲ್ಲ ಸಾಕು ಎಂದು ಅಮೆರಿಕದ ಕಾರ್ನೆಲ್ ವಿವಿಯಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಗಳಿಸಲು ತೆರಳಿ ದರು. ಅವರ ಕ್ರಿಕೆಟ್ ಜೀವನ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದಾಗ ಸೌರಭ್ ಈಗ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ!
Advertisement
2010ರ 19 ವಯೋಮಿತಿ ವಿಶ್ವಕಪ್ ನ್ಯೂಜಿಲೆಂಡ್‌ನಲ್ಲಿ ನಡೆದಿತ್ತು. ಆಗ ಭಾರತ ತೀರಾ ಕಳಪೆ ಪ್ರದರ್ಶನ ನೀಡಿ 6ನೇ ಸ್ಥಾನಿಯಾಗಿತ್ತು. ಅಂತಹ ಬೇಸರದ ಸನ್ನಿವೇಶದಲ್ಲಿ ಎಡಗೈ ಮಧ್ಯಮವೇಗಿ ಸೌರಭ್ ನೇತ್ರಾವಲ್ಕರ್ ತಂಡದಲ್ಲೇ ಗರಿಷ್ಠ ವಿಕೆಟ್ ಪಡೆದ ಸಾಧಕನೆನಿಸಿದ್ದರು. ಮುಂದೆ ಅವರು ಮುಂಬೈ ಪರ ಒಂದು ರಣಜಿ ಪಂದ್ಯವನ್ನೂ ಆಡಿದ್ದರು. ಅದೂ ಕರ್ನಾಟಕದ ವಿರುದ್ಧ. ತಮ್ಮ ಬೌಲಿಂಗ್‌ನಲ್ಲಿ 3 ವಿಕೆಟ್ ಗಳಿಸಿದರೂ ಅವರಿಗೆ ತಾನು ಕ್ರಿಕೆಟ್‌ನಲ್ಲಿ ನಿರೀಕ್ಷೆಗೆ ತಕ್ಕಷ್ಟು ಸಾಧನೆ ಮಾಡಿದ್ದೇನೆಂದು ಅನಿಸಲಿಲ್ಲ. ಆದ್ದರಿಂದ 2015ರಲ್ಲಿ ಅಮೆರಿಕಕ್ಕೆ ತೆರಳಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ತರಗತಿಗೆ ಸೇರಿಕೊಂಡರು.
ಕ್ರಿಕೆಟ್ ಸಾಕೆಂದು ಅಮೆರಿಕಕ್ಕೆ ತೆರಳಿದ್ದರೂ ಸೌರಭ್‌ಗೆ ಅದರ ಹುಚ್ಚಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಆದ್ದರಿಂದ ಅಲ್ಲೂ ಆಟ
ಮುಂದುವರಿಸಿದರು. ಅದನ್ನು ಸೌರಭ್ ವಿವರಿಸಿದ್ದು ಹೀಗೆ…
Related Articles
Advertisement
ಸೋಮವಾರ ಮತ್ತೆ ಕೆಲಸಕ್ಕೆ ಮರಳುತ್ತಿದ್ದೆವು. ಆಯ್ಕೆಗಾರರ ಕಣ್ಣಿಗೆ ಬೀಳಲು ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ’ ಎಂದು ಸೌರಭ್ ತಿಳಿಸಿದ್ದಾರೆ. ಅಮೆರಿಕ ತಂಡ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ 3ನಲ್ಲಿ ಆಡಲು ಒಮಾನ್‌ಗೆ ತೆರಳಲಿದ್ದು, ಈ ಟೂರ್ನಿ 2023ರ ಏಕದಿನ ವಿಶ್ವಕಪ್ ಕೂಟದ ಅರ್ಹತಾ ಸುತ್ತುಗಳಲ್ಲಿ ಒಂದಾಗಿದೆ. ಅಮೆರಿಕ ತಂಡ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವುದು ಸೌರಭ್ ಅವರ ಕನಸು.