Advertisement

ವೈಷ್ಣೋದೇವಿ ಸನ್ನಿಧಿಯಲ್ಲಿ ಸಿಧುಗೆ ಶಿವ ಸೈನಿಕರ ಮುತ್ತಿಗೆ

09:13 AM Oct 01, 2019 | Team Udayavani |

ಶ್ರೀನಗರ: ವಿವಾದಾತ್ಮಕ ಹೆಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಶಾಸಕ ಮತ್ತು ಮಾಜೀ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಶಿವಸೇನಾ ಕಾರ್ಯಕರ್ತರು ಜಮ್ಮು ಕಾಶ್ಮೀರದ ವೈಷ್ಣೋದೇವಿ ಸನ್ನಿಧಾನದಲ್ಲಿ ಮುತ್ತಿಗೆ ಹಾಕಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವ ಘಟನೆ ಸೋಮವಾರದಂದು ವರದಿಯಾಗಿದೆ.

Advertisement

ಸಿಧು ಅವರ ಪಾಕಿಸ್ಥಾನ ಪರ ಧೋರಣೆಯನ್ನು ಸೇನಾ ಕಾರ್ಯಕರ್ತರು ಖಂಡಿಸಿದರು ಮತ್ತು ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಮಾತ್ರವಲ್ಲದೇ ದೇವಾಲಯದಲ್ಲಿ ಸಿಧು ಅವರಿಗೆ ವಿವಿಐಪಿ ಸೌಲಭ್ಯವನ್ನು ನೀಡಿರುವ ಕುರಿತಾಗಿಯೂ ಸ್ಥಳದಲ್ಲಿದ್ದ ಶಿವಸೇನಾ ಕಾರ್ಯಕರ್ತರು ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿಯ ಬಳಿಕ ಸಿಧು ಅವರು ಪಾಕಿಸ್ಥಾನದೊಂದಿಗೆ ಭಾರತ ಶಾಂತಿ ಮಾತುಕತೆ ನಡೆಸಬೇಕು ಎಂದು ಹೇಳಿಕೆ ನೀಡುವ ಮೂಲಕ ಸಿಧು ಅವರು ದೇಶವಾಸಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

2018ರ ನವಂಬರ್ 28ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಹ್ವಾನದ ಮೇಲೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ಸಿಧು ಅವರು ಅಲ್ಲಿ ಕರ್ತಾಪುರ ಸಾಹೀಬ್ ಕಾರಿಡಾರ್ ಅಡಿಗಲ್ಲು ಸಮಾರಂಭದಲ್ಲೂ ಭಾಗಿಯಾಗುವ ಮೂಲಕ ಸುದ್ದಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಿಧು ಅವರು ಇಮ್ರಾನ್ ಖಾನ್ ಅವರನ್ನು ಪ್ರಶಂಸಿದ್ದರು ಮತ್ತು ಈ ಯೋಜನೆಯ ಮೂಲಕ ಖಾನ್ ಅವರ ಹೆಸರು ತಲೆಮಾರುಗಳವರೆಗೆ ನೆನಪಿನಲ್ಲಿರುತ್ತದೆ ಎಂದು ಹೇಳುವ ಮೂಲಕ ಭಾರತದಲ್ಲಿ ತಮ್ಮ ವಿರುದ್ಧ ಆಕ್ರೋಶ ಮೂಡಲು ಕಾರಣರಾಗಿದ್ದರು.

ಇದಕ್ಕೂ ಮೊದಲು ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಭಾಗಿಯಾಗಿದ್ದ ನವಜೋತ್ ಸಿಂಗ್ ಸಿಧು ಅವರು ಆ ಸಂದರ್ಭದಲ್ಲಿ ಪಾಕಿಸ್ಥಾನದ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ಆಲಂಗಿಸಿಕೊಳ್ಳುವ ಮೂಲಕ ಭಾರೀ ವಿವಾದಕ್ಕೆ ಕಾರಣವಾಗಿದ್ದರು.

Advertisement

ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿರುವ ಸಿಧು ಅವರ ಕೈಯಲ್ಲಿದ್ದ ಸ್ಥಳೀಯಾಡಳಿತ, ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ವ್ಯವಹಾರಗಳಂತಹ ಪ್ರಮುಖ ಖಾತೆಗಳನ್ನು ಕಳೆದ ಜೂನ್ ನಲ್ಲಿ ನಡೆದ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಸಿಂಗ್ ಅವರು ಬದಲಾಯಿಸಿ ಸಿಧು ಅವರಿಗೆ ಇಂಧನ ಹಾಗೂ ನವೀನ ಮತ್ತು ಪುನರ್ ನವೀಕರಣ ಇಂಧನ ಖಾತೆಗಳನ್ನು ಕೊಟ್ಟಿದ್ದೂ ಸಹ ಸಿಧು ಅಸಮಧಾನಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next