Advertisement
ಭೇಟಿಯ ಬಳಿಕ ಮಾತನಾಡಿದ ಕುಮಾರಸ್ವಾಮಿ, ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗಿ ಪಾಲಾಗಲು ಅವಕಾಶ ಕೊಡದಂತೆ ಮನವಿ ಮಾಡಿದ್ದೇವೆ. ಮೈಶುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಬದಲು ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದರು.
Related Articles
Advertisement
ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು, ಯೋಜನೆಯಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡುವ ಯೋಚನೆ ನಮಗಿಲ್ಲ. ನಾವು ತಮಿಳು ನಾಡಿಗೆ ನೀಡುವ ನೀರು ನಿಲ್ಲಿಸುವುದಿಲ್ಲ. ಟ್ರಿಬ್ಯುನಲ್ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ. ನ್ಯಾಯಾಧೀಕರಣದ ತೀರ್ಪು ನಾವು ಉಲ್ಲಂಘಿಸುವುದಿಲ್ಲ.ನಾವು ಸಹೋದರರಂತೆ ಇರಬೇಕಾಗಿದೆ. ಅದಕ್ಕೆ ನಿಮ್ಮ ಸಹಕಾರವೂ ಬೇಕಿದೆ ಎಂದು ಎಚ್ ಡಿಕೆ ಹೇಳಿದರು.
ತಮಿಳುನಾಡಿನ ಹೊಗೇನಕಲ್ ನಲ್ಲಿ ಯಾರ ಅಪ್ಪಣೆ ತಗೆದುಕೊಂಡು ಜಲಾಶಯ ಕಟ್ಟಿದರು? ಹಾಗೆಯೇ ನಮ್ಮ ನಾಡಿನಲ್ಲಿ ನಾವು ಜಲಾಶಯ ನಿರ್ಮಿಸಲು ಅವರು ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿಯವರು ತಮಿಳುನಾಡಿನ ನಡೆಗೆ ವಿರೋಧ ವ್ಯಕ್ತಪಡಿಸಿದರು.